ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಸತತ ಐದನೇ ಸೆಷನ್ ಲಾಭವನ್ನು ಕಂಡಿದೆ. ಜಾಗತಿಕ ಸೂಚನೆಗಳು ದುರ್ಬಲವಾಗಿದ್ದರೂ ಕೂಡಾ ಲಾರ್ಸೆನ್ & ಟೂಬ್ರೊ, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ಹಲವಾರು ಷೇರುಗಳು ಭಾರೀ ಲಾಭವನ್ನು ಗಳಿಸಿದೆ. ಒಂದು ದಿನದಲ್ಲೇ ಹೂಡಿಕೆದಾರರು 2 ಲಕ್ಷ ಕೋಟಿ ರೂಪಾಯಿಯನ್ನು ಗಳಿಸಿದ್ದಾರೆ.
ಏಷ್ಯಾದ ಪ್ರಮುಖ ಮಾರುಕಟ್ಟೆಗಳಾದ ಜಪಾನ್‌ನ ನಿಕ್ಕಿ ಮತ್ತು ಚೀನಾದ ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಹಣದುಬ್ಬರ ಮತ್ತು ಕುಂಟುತ್ತಿರುವ ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲಿನ ಕಳವಳದಿಂದ ಶೇಕಡದಷ್ಟು ಇಳಿಕೆ ಕಂಡಿದೆ. ವಹಿವಾಟಿನ ಅಂತ್ಯದಲ್ಲಿ ಪ್ರಮುಖ ಯುರೋಪಿಯನ್ ಮಾರುಕಟ್ಟೆಗಳು ಸಣ್ಣ ಲಾಭದೊಂದಿಗೆ ವಹಿವಾಟು ನಡೆಸಿದೆ.

ಈ ನಡುವೆ ಯುಎಸ್ ಡಾಲರ್ ಮೌಲ್ಯವು ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ಗಿಂತ ಅಧಿಕವಾಗಿದೆ. ಈ ಸವಾಲುಗಳ ಹೊರತಾಗಿಯೂ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಲಾಭವು ಸತತ ಐದನೇ ದಿನ ವಿಸ್ತರಣೆಯಾಗಿದೆ. ಗುರುವಾರವೂ ಕೂಡಾ ಷೇರುಪೇಟೆ ಏರಿಕೆಯಾಗಿದೆ.
ಇಂದು ಷೇರು ಮಾರುಕಟ್ಟೆ ಹೇಗಿದೆ?
ಈ ಹಿಂದಿನ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ವಹಿವಾಟಿನ ಅಂತ್ಯದಲ್ಲಿ 65,880.52ರಷ್ಟಿತ್ತು. ಗುರುವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 26 ಪಾಯಿಂಟ್‌ಗಳಷ್ಟು ಇಳಿಕೆಯಾಗಿ, 65,854.25 ಕ್ಕೆ ವಹಿವಾಟು ಪ್ರಾರಂಭ ಮಾಡಿದೆ. ವಹಿವಾಟಿನ ಅರ್ಧದಷ್ಟು ಹೆಚ್ಚೂ ಭಾಗ ಏರಿಳಿತ ಕಂಡು ಬಂದಿದೆ.
ಅಂತಿಮವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಸುಮಾರು 416 ಪಾಯಿಂಟ್‌ಗಳ ಹಠಾತ್ ಏರಿಕೆಯನ್ನು ಕಂಡಿದೆ. ವಹಿವಾಟಿ ಕೊನೆಯಲ್ಲಿ ಸೆನ್ಸೆಕ್ಸ್ 385 ಪಾಯಿಂಟ್‌ಗಳು ಅಥವಾ ಶೇಕಡ 0.58 ರಷ್ಟು ಏರಿಕೆಯಾಗಿ 66,265.56 ಕ್ಕೆ ಕೊನೆಗೊಂಡಿದೆ. ನಿಫ್ಟಿ 50 ಸುಮಾರು 116 ಪಾಯಿಂಟ್‌ಗಳು ಅಥವಾ ಶೇಕಡ 0.59 ರಷ್ಟು ಜಿಗಿತಗೊಂಡು 19,727.05 ಕ್ಕೆ ವಹಿವಾಟು ಕೊನೆ ಮಾಡಿದೆ.
ಲಾರ್ಸೆನ್ ಅಂಡ್ ಟೂಬ್ರೊ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಷೇರುಗಳು ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಲಾಭ ಗಳಿಸಿದ ಅಗ್ರ ಐದು ಷೇರುಗಳಾಗಿದೆ. ಮಿಡ್ ಮತ್ತು ಸ್ಮಾಲ್‌ಕ್ಯಾಪ್‌ಗಳು ಸಹ ಯೋಗ್ಯವಾದ ಲಾಭವನ್ನು ಗಳಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ವಹಿವಾಟಿನಲ್ಲಿ 32,396.28 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ವಹಿವಾಟಿನ ಕೊನೆಗೆ ಶೇಕಡ 0.79 ರಷ್ಟು ಏರಿಕೆಯಾಗಿ 32,374.93 ಕ್ಕೆ ಸ್ಥಿರವಾಗಿದೆ.
ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ತನ್ನ ಹೊಸ ಸಾರ್ವಕಾಲಿಕ ಗರಿಷ್ಠಮಟ್ಟ 38,169.65 ಕ್ಕೆ ತಲುಪಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಶೇಕಡ 0.40ರಷ್ಟು ಏರಿಕೆಯಾಗಿ 38,101.21ಕ್ಕೆ ಸ್ಥಿರವಾಗಿದೆ. ಬಿಎಸ್‌ಇಯಲ್ಲಿ ಲೀಸ್ಟ್ ಮಾಡಲಾದ ಒಟ್ಟು ಷೇರುಗಳ ಮೌಲ್ಯ ಸೆಷನ್‌ನಲ್ಲಿ 317.3 ಲಕ್ಷ ಕೋಟಿ ರೂಪಾಯಿಯಿಂದ 319.1 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹೂಡಿಕೆದಾರರು ಒಂದೇ ಅಧಿವೇಶನದಲ್ಲಿ ಸುಮಾರು 1.8 ಲಕ್ಷ ಕೋಟಿ ರೂಪಾಯಿಗಳಷ್ಟು ಶ್ರೀಮಂತರಾಗಿದ್ದಾರೆ.
ಈ ಹಿಂದೆ ಸೆಪ್ಟೆಂಬರ್ 4ರಂದು ಷೇರು ಮಾರುಕಟ್ಟೆ ಹೂಡಿಕೆದಾರರು ಒಂದು ದಿನದಲ್ಲೇ 3 ಲಕ್ಷ ಕೋಟಿ ರೂಪಾಯಿ ಗಳಿಸಿದ್ದಾರೆ. ಸೆನ್ಸೆಕ್ಸ್ ಸೋಮವಾರ (ಸೆಪ್ಟೆಂಬರ್ 4) ವಹಿವಾಟಿನ ಅಂತ್ಯದಲ್ಲಿ 241 ಅಂಕಗಳು ಅಥವಾ ಶೇಕಡ 0.37 ರಷ್ಟು ಏರಿಕೆಯಾಗಿ 65,628.14 ಕ್ಕೆ ವಹಿವಾಟು ಕೊನೆ ಮಾಡಿದರೆ, ನಿಫ್ಟಿ 94 ಪಾಯಿಂಟ್ ಅಥವಾ ಶೇಕಡ 0.48 ರಷ್ಟು ಏರಿಕೆಯಾಗಿ 19,528.80 ಕ್ಕೆ ಸ್ಥಿರವಾಗಿದೆ.


Click it and Unblock the Notifications