ಆಗಸ್ಟ್‌ನಲ್ಲಿ ಯುಎಸ್ ನಿರುದ್ಯೋಗ ದರದ ಜಿಗಿತದ ನಡುವೆ ಯುಎಸ್ ಫೆಡರಲ್ ರಿಸರ್ವ್ ಸೆಪ್ಟೆಂಬರ್‌ನಲ್ಲಿ ದರಗಳನ್ನು ಹೆಚ್ಚಳ ಮಾಡಲಾಗದು ಎಂಬ ಸುದ್ದಿಯ ಬಳಿಕ ಷೇರು ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ. ಸತತವಾಗಿ ಎರಡು ಸೆಷನ್‌ಗಳ ಕಾಲ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಲಾಭ ಉಂಟಾಗಿದೆ. ಸೋಮವಾರ ಸೆನ್ಸೆಕ್ಸ್, ನಿಫ್ಟಿ ಏರಿಕೆ ಕಂಡಿದೆ.
"ಶುಕ್ರವಾರದ ದತ್ತಾಂಶವು ಆಗಸ್ಟ್‌ನಲ್ಲಿ ಯುಎಸ್ ಉದ್ಯೋಗದ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ತೋರಿಸಿದೆ. ಆದರೆ ನಿರುದ್ಯೋಗ ದರವು ಶೇಕಡ 3.8ಕ್ಕೆ ಏರಿದೆ. ಆದರೆ ವೇತನ ಲಾಭ ಮಧ್ಯಮವಾಗಿದೆ. ಆರ್ಥಿಕತೆಯು ಈ ಹಿಂದೆ ಜೂನ್ ಮತ್ತು ಜುಲೈನಲ್ಲಿ ವರದಿ ಮಾಡಿದ್ದಕ್ಕಿಂತ 110,000 ಕಡಿಮೆ ಉದ್ಯೋಗಗಳನ್ನು ಸೃಷ್ಟಿಸಿದೆ," ಎಂದು ರಾಯಿಟರ್ಸ್ ವರದಿ ಮಾಡಿದೆ.

ಯುಎಸ್ ಆರ್ಥಿಕ ವ್ಯವಸ್ಥೆಯು ಭಾರತದ ಷೇರುಪೇಟೆ ಮೇಲೆ ಪ್ರಭಾವ ಬೀರುತ್ತದೆ. ಯುಎಸ್‌ನ ಇತ್ತೀಚಿನ ಡೇಟಾವು ಹಣದುಬ್ಬರವು ತಗ್ಗುತ್ತಿದೆ ಎಂದು ತೋರಿಸುತ್ತದೆ. ಯುಎಸ್ ಆರ್ಥಿಕತೆಯು ನಿಧಾನವಾಗಿ ಕುಗ್ಗಲು ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ.
ಮಾಧ್ಯಮಗಳ ವರದಿ ಪ್ರಕಾರ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ 2023 ರ ಕ್ಯಾಲೆಂಡರ್ ವರ್ಷಕ್ಕೆ ಭಾರತದ ಆರ್ಥಿಕತೆಯ ಬೆಳವಣಿಗೆಯ ಮುನ್ಸೂಚನೆಯನ್ನು 5.5 ರಿಂದ 6.7 ಕ್ಕೆ ಹೆಚ್ಚಿಸಿದೆ. ಇದಾದ ಬಳಿಕ ಮೋರ್ಗನ್ ಸ್ಟಾನ್ಲಿಯು ಭಾರತದ ಬೆಳವಣಿಗೆಯ ಅಂದಾಜನ್ನು ಶೇಕಡ 6.4 ಕ್ಕೆ ಹೆಚ್ಚಿಸಿದೆ. ಈ ಹಿಂದೆ ಮೋರ್ಗನ್ ಸ್ಟಾನ್ಲಿಯು 2023-2024 ರ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆ ದರವು ಶೇಕಡ 6.2 ರಷ್ಟಿರಲಿದೆ ಎಂದು ಅಂದಾಜು ಮಾಡಿತ್ತು.
ಇಂದು ಷೇರು ಮಾರುಕಟ್ಟೆ
ಈಕ್ವಿಟಿ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಶುಕ್ರವಾರ 65,387.16 ಕ್ಕೆ ವಹಿವಾಟು ಸ್ಥಿರವಾಗಿದೆ. ಆದರೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 139 ಪಾಯಿಂಟ್‌ಗಳಷ್ಟು ಏರಿಕೆಯನ್ನು ಕಂಡು 65,525.91 ಕ್ಕೆ ವಹಿವಾಟು ಪ್ರಾರಂಭ ಮಾಡಿದೆ. ವಹಿವಾಟಿನ ಮಧ್ಯದಲ್ಲಿ ಸೆನ್ಸೆಕ್ಸ್ 297 ಪಾಯಿಂಟ್‌ಗಳ ಏರಿಕೆಯೊಂದಿಗೆ 65,683.91ಕ್ಕೆ ತಲುಪಿದೆ. ನಿಫ್ಟಿ 50 ಇಂಟ್ರಾಡೇ ಗರಿಷ್ಠ ಮಟ್ಟ 19,545.15 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಸೋಮವಾರ (ಸೆಪ್ಟೆಂಬರ್ 4) ವಹಿವಾಟಿನ ಅಂತ್ಯದಲ್ಲಿ 241 ಅಂಕಗಳು ಅಥವಾ ಶೇಕಡ 0.37 ರಷ್ಟು ಏರಿಕೆಯಾಗಿ 65,628.14 ಕ್ಕೆ ವಹಿವಾಟು ಕೊನೆ ಮಾಡಿದರೆ, ನಿಫ್ಟಿ 94 ಪಾಯಿಂಟ್ ಅಥವಾ ಶೇಕಡ 0.48 ರಷ್ಟು ಏರಿಕೆಯಾಗಿ 19,528.80 ಕ್ಕೆ ಸ್ಥಿರವಾಗಿದೆ.
ಮಿಡ್ ಮತ್ತು ಸ್ಮಾಲ್‌ಕ್ಯಾಪ್‌ಗಳು ತಮ್ಮ ಉತ್ತಮ ಪ್ರದರ್ಶನ ತೋರಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ವಹಿವಾಟಿನಲ್ಲಿ 31,783.29ರ ಹೊಸ ದಾಖಲೆಯನ್ನು ತಲುಪಿದೆ. ಆದರೆ ಶೇಕಡ 0.96 ರಷ್ಟು ಏರಿಕೆಯಾಗಿ 31,736.06 ಕ್ಕೆ ವಹಿವಾಟು ಕೊನೆ ಮಾಡಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠಮಟ್ಟ 37,828.34 ಕ್ಕೆ ತಲುಪಿದೆ. ನಂತರ ಶೇಕಡ 0.84 ರಷ್ಟು ಏರಿಕೆಯಾಗಿ 37,734.14 ಕ್ಕೆ ಸ್ಥಿರವಾಗಿದೆ.
ಹೆಚ್‌ಸಿಎಲ್ ಟೆಕ್, ಮಾರುತಿ ಸುಜುಕಿ, ಎನ್‌ಟಿಪಿಸಿ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ವಿಪ್ರೋ ಸೇರಿದಂತೆ 400 ಕ್ಕೂ ಹೆಚ್ಚು ಷೇರುಗಳು ಬಿಎಸ್‌ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಬಿಎಸ್‌ಇಯಲ್ಲಿ ಮಾರುಕಟ್ಟೆ ಮೌಲ್ಯವು ಹಿಂದಿನ ಸೆಷನ್‌ನಲ್ಲಿ ಸುಮಾರು 312.4 ಲಕ್ಷ ಕೋಟಿ ರೂಪಾಯಿ ಆಗಿದ್ದು, ಸೋಮವಾರ 315 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಂದೇ ಅವಧಿಯಲ್ಲಿ ಹೂಡಿಕೆದಾರರು ಸುಮಾರು 2.6 ಲಕ್ಷ ಕೋಟಿ ರೂಪಾಯಿಯಷ್ಟು ಲಾಭವನ್ನು ಗಳಿಸಿದ್ದಾರೆ.


Click it and Unblock the Notifications