For Quick Alerts
ALLOW NOTIFICATIONS  
For Daily Alerts

41,000 ಗಡಿಯಿಂದ ಕುಸಿದ ಸೆನ್ಸೆಕ್ಸ್, ಇಳಿಕೆ ಕಂಡ ನಿಫ್ಟಿ

|

ಕಳೆದೆರಡು ದಿನಗಳಲ್ಲಿ ಏರುಮುಖ ದಾಖಲಿಸಿ ಮೊಟ್ಟ ಮೊದಲ ಬಾರಿಗೆ 41,000 ಗಡಿ ದಾಟಿದ್ದ ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) ಸೂಚ್ಯಂಕ ಭಾರೀ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ ಇಳಿಕೆ ದಾಖಲಿಸಿದೆ.

 

ಷೇರು ಹೂಡಿಕೆದಾರರಿಗೆ ಶುಕ್ರವಾರ ಶುಭ ತರಲಿಲ್ಲ. ಸೆನ್ಸೆಕ್ಸ್ ಶೇಕಡಾ 0.82ರಷ್ಟು ಅಥವಾ 336.36 ಅಂಶಗಳು ಕುಸಿತ ಕಂಡು 40,793.81 ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಕೂಡ ಶೇಕಡಾ 0.78ರಷ್ಟು ಅಥವಾ 95.20 ಅಂಶಗಳು ಕುಸಿತ ಕಂಡು 12,056 ಅಂಶಗಳಿಗೆ ತಲುಪಿದೆ.

 
41,000 ಗಡಿಯಿಂದ ಕುಸಿದ ಸೆನ್ಸೆಕ್ಸ್, ಇಳಿಕೆ ಕಂಡ ನಿಫ್ಟಿ

ಜೀ ಎಂಟರ್‌ಟೈನ್‌ಮೆಂಟ್, ಯೆಸ್ ಬ್ಯಾಂಕ್, ಹೆಚ್‌ಯುಎಲ್, ಎಸ್‌ಬಿಐ ಮತ್ತು ಡಾ. ರೆಡ್ಡಿ ಲ್ಯಾಬೊರೇಟರಿಸ್ ಕಂಪನಿಯ ಷೇರುಗಳು ತೀವ್ರ ಕುಸಿದು ಶೇಕಡಾ 2ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದವು. ಈ ಕುಸಿತದ ನಡುವೆ 182 ಷೇರುಗಳು ಏರಿಕೆ ಕಂಡಿದ್ದು ಅದರಲ್ಲಿ ಪ್ರಮುಖವಾಗಿ ಭಾರತಿ ಏರ್‌ಟೆಲ್, ಅದಾನಿ ಪೋರ್ಟ್ಸ, ಹೆಚ್‌ಡಿಎಫ್‌ಸಿ ಬ್ಯಾಂಕ್, ಎನ್‌ಟಿಪಿಸಿ ಕಂಪನಿಯ ಷೇರುಗಳು ಏರಿಕೆ ಕಂಡಿವೆ.

ಅಮೆರಿಕಾ-ಚೀನಾ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಅನಿಶ್ಚಿತತೆ, ಜುಲೈ-ಸೆಪ್ಟೆಂಬರ್ ತಿಂಗಳಿನ ಎರಡನೇ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಷೇರುಗಳು ಖರೀದಿಗಿಂತ ಹೆಚ್ಚಾಗಿ ಮಾರಾಟಕ್ಕೆ ಮುಂದಾದರು.

English summary

SENSEX, NIFTY Fall After 2 day Gains

After posting gains in the previous two straight sessions, Sensex falling below 41,000 and nifty fell 95.20 points
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X