ಈ ವಾರದ ಕೊನೆಯ ವಹಿವಾಟಿನ ಅಂತ್ಯದಲ್ಲಿಯೂ ಷೇರು ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಷೇರು ಮಾರುಕಟ್ಟೆ ಈ ವರ್ಷದಲ್ಲೇ ಕಂಡ ಕೆಟ್ಟ ವಾರ ಇದಾಗಿದೆ. ಈ ವಾರದಲ್ಲಿ ಸತತ ಆರನೇ ದಿನ ವಹಿವಾಟಿನ ಅಂತ್ಯಕ್ಕೆ ಷೇರು ಮಾರುಕಟ್ಟೆ ನಷ್ಟ ಕಂಡಿದೆ.
2020ರ ಮಾರ್ಚ್ ಬಳಿಕ ಷೇರು ಪೇಟೆ ಮೊದಲ ಬಾರಿಗೆ ಇಷ್ಟು ಕುಸಿತವನ್ನು ಕಂಡಿದೆ. 2020ರಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯು ಭಾರೀ ನಷ್ಟವನ್ನು ಕಂಡಿತ್ತು. ಅದಾದ ಬಳಿಕ ಈ ವಾರದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರು ಭಾರೀ ನಷ್ಟವನ್ನು ಕಂಡಿದ್ದಾರೆ.
ಸೆನ್ಸೆಕ್ಸ್ ಸುಮಾರು 135.57 ಅಂಕ ಅಥವಾ ಶೇಕಡ 0.26ರಷ್ಟು ಕೆಳಕ್ಕೆ ಇಳಿದು 51,360.42ರಲ್ಲಿ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ ಶೇಕಡ 0.44ರಷ್ಟು ಕುಸಿದು 15,293.50ಕ್ಕೆ ಸ್ಥಿರವಾಗಿದೆ. ಟೈಟಾನ್, ವಿಪ್ರೋ ಭಾರೀ ನಷ್ಟವನ್ನು ಕಂಡಿದೆ.

ಯಾವ ಷೇರಿಗೆ ನಷ್ಟ, ಯಾವ ಷೇರಿಗೆ ಲಾಭ
ಟೈಟಾನ್, ವಿಪ್ರೋ, ಡಾ ರೆಡ್ಡೀಸ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಪವರ್ ಗ್ರಿಡ್, ಲಾರ್ಸೆನ್ & ತೌಬ್ರೋ, ಅಲ್ಟ್ರಾಕೆಟ್ ಸಿಮೆಂಟ್, ಮಾರುತಿ, ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್ ಭಾರೀ ನಷ್ಟವನ್ನು ಕಂಡಿದೆ.
ನಿಫ್ಟಿಯಲ್ಲಿ ಟೈಟಾನ್ ಭಾರೀ ಕೆಳಕ್ಕೆ ಕುಸಿದಿದೆ. ಟೈಟಾನ್ ಶೇಕಡ ಆರರಷ್ಟು ಕೆಳಕ್ಕೆ ಇಳಿಯುವ ಮೂಲಕ ಷೇರು ಪೇಟೆಯಲ್ಲಿ ಎರಡು ವರ್ಷದಲ್ಲೇ ಅತೀ ಕೆಟ್ಟ ದಿನವನ್ನು ಕಂಡಿದೆ. ಮೂವತ್ತು ಷೇರುಗಳ ಪೈಕಿ ಕೇವಲ ಒಂಬತ್ತು ಷೇರುಗಳು ಮಾತ್ರ ಲಾಭವನ್ನು ಕಂಡಿದೆ. ಉಳಿದೆಲ್ಲವೂ ಕುಸಿತ ಕಂಡಿದೆ.
ಇನ್ನೊಂದೆಡೆ ಬಜಾಜ್ ಫಿನಾನ್ಸ್, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಲಾಭವನ್ನು ಕಂಡಿದೆ. ರಿಲಯನ್ಸ್ ಷೇರು ಶೇಕಡ 1.2 ಮೇಲಕ್ಕೇರಿ ವಹಿವಾಟು ಅಂತ್ಯ ಮಾಡಿದೆ. ಈ ನಡುವೆ ಸಕ್ಕರೆ ಉತ್ಪಾದಕರ ಷೇರುಗಳು ಒಂದರಿಂದ ಆರು ಶೇಕಡದಷ್ಟು ಕೆಳಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ಸಕ್ಕರೆ ರಫ್ತು ಮೇಲೆ ನಿಷೇಧ ಹೇರುವ ಸಾಧ್ಯತೆ ಹಿನ್ನೆಲೆ ಹೂಡಿಕೆದಾರರು ಸಕ್ಕರೆ ಷೇರಿನಿಂದ ಹಿಂದಕ್ಕೆ ಸರಿದಿದ್ದಾರೆ. ''
ಯುಎಸ್ ಫೆಡರಲ್ 1994ರ ಬಳಿಕ ಮೊದಲ ಬಾರಿಗೆ ಬಡ್ಡಿದರವನ್ನು ಭಾರೀ ಹೆಚ್ಚಳ ಮಾಡಿದೆ. ಇದರ ಪರಿಣಾಮ ಷೇರು ಪೇಟೆಯ ಮೇಲೆ ಬಿದ್ದಿದೆ. ಹಣದುಬ್ಬರ, ಉಕ್ರೇನ್-ರಷ್ಯಾ ಯುದ್ಧವು ಕೂಡಾ ಷೇರು ಪೇಟೆಯ ಮೇಲೆ ಪರಿಣಾಮ ಉಂಟು ಮಾಡಿದೆ.


Click it and Unblock the Notifications