ಷೇರು ಮಾರುಕಟ್ಟೆಯು ನಿರಂತರವಾಗಿ ಏರಿಕೆಯನ್ನು ಕಾಣುತ್ತಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಸಾರ್ವಕಾಲಿಕವಾಗಿ ಹೆಚ್ಚಳ ಕಾಣುತ್ತಾ ಬಂದಿದೆ. ಇಂದು ಪ್ರಮುಖವಾಗಿ ಇನ್ಫೋಸಿಸ್ ಸ್ಟಾಕ್ ಅತೀ ಅಧಿಕ ಲಾಭವನ್ನು ಗಳಿಸಿದೆ. ಆರಂಭಿಕ ವಹಿವಾಟಿನಲ್ಲಿ ಪ್ರಮುಖವಾಗಿ ಸ್ಟಾಕ್ ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಆದರೆ ವಹಿವಾಟಿನ ಅಂತ್ಯದಲ್ಲಿ ಕೊಂಚ ಇಳಿಕೆಯಾಗಿದೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮಂಗಳವಾರ ಶೇಕಡ 0.48 ರಷ್ಟು ಅಥವಾ 321.48 ಪಾಯಿಂಟ್‌ಗಳು ಏರಿಕೆಯಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟ 66,911.41ಕ್ಕೆ ತಲುಪಿದೆ. ನಿಫ್ಟಿ ಕೂಡಾ ಲಾಭವನ್ನು ಕಂಡಿದೆ. ನಿಫ್ಟಿ ಶೇಕಡ 0.40ರಷ್ಟು ಅಥವಾ 79.20 ಅಂಕ ಜಿಗಿತ ಕಂಡು 19,790.70ಕ್ಕೆ ತಲುಪಿದೆ. 1546 ಷೇರುಗಳು ಏರಿಕೆಯಾಗಿದ್ದರೆ, 504 ಷೇರುಗಳು ಇಳಿಕೆಯಾಗಿದೆ. 104 ಷೇರುಗಳು ಸ್ಥಿರವಾಗಿತ್ತು. ಹಾಗಾದರೆ ವಹಿವಾಟಿನ ಅಂತ್ಯದಲ್ಲಿ ಸ್ಟಾಕ್ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಆರಂಭಿಕ ವಹಿವಾಟಿನಲ್ಲಿ ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ
ಆರಂಭಿಕ ವಹಿವಾಟಿನಲ್ಲಿ ಇನ್ಫೋಸಿಸ್, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್‌ಇಂಡ್ ಬ್ಯಾಂಕ್ ಅತೀ ಅಧಿಕ ಲಾಭವನ್ನು ಕಂಡಿರುವ ಸ್ಟಾಕ್‌ಗಳು ಆಗಿದೆ. ಇನ್ನು ನಿಫ್ಟಿ ಎಲ್‌ಟಿಐಮಿಂಡ್‌ಟ್ರೀ, ಟೈಟಾನ್ ಕಂಪನಿ, ಡಾ.ರೆಡ್ಡೀಸ್ ಲ್ಯಾಬ್, ಎಚ್‌ಡಿಎಫ್‌ಸಿ ಲೈಫ್, ಸನ್ ಫಾರ್ಮಾ ಸ್ಟಾಕ್ ಕುಸಿತ ಕಂಡಿದೆ. ವಹಿವಾಟಿನ ಅಂತ್ಯದ ವೇಳೆಗೂ ಇನ್ಫೋಸಿಸ್ ಸ್ಟಾಕ್ ಟಾಪ್ ಗೇನರ್ ಆಗಿ ಉಳಿದಿದೆ.
ವಹಿವಾಟಿನ ಅಂತ್ಯದಲ್ಲಿ ಸ್ಟಾಕ್ ಹೇಗಿದೆ?
ಜುಲೈ 18ರಂದು ವಹಿವಾಟಿನ ಅಂತ್ಯದಲ್ಲಿಯೂ ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆಯಾಗಿದೆ. ಮಂಗಳವಾರ, ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 205.21 ಪಾಯಿಂಟ್ ಅಥವಾ ಶೇ.0.31ರಷ್ಟು ಏರಿಕೆಯಾಗಿ, 66,795.14ಕ್ಕೆ ತಲುಪಿದೆ. ನಿಫ್ಟಿ 37.80 ಅಂಕ, ಶೇ.0.19ರಷ್ಟು ಜಿಗಿತವಾಗಿ 19,749.30ಕ್ಕೆ ತಲುಪಿದೆ. 1384 ಷೇರುಗಳು ಏರಿಕೆಯಾಗಿದ್ದರೆ, 1958 ಷೇರುಗಳು ಇಳಿಕೆಯಾಗಿದೆ. 118 ಷೇರುಗಳು ಸ್ಥಿರವಾಗಿದೆ.
ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ರಿಲಯನ್ಸ್ ಇಂಡಸ್ಟ್ರೀಸ್, ಹಿರೋ ಮೋಟೋಕಾರ್ಪ್ ನಿಫ್ಟಿಯಲ್ಲಿ ಟಾಪ್ ಗೇನರ್‌ಗಳು ಆಗಿದ್ದಾರೆ. ಇನ್ನು ನಿಫ್ಟಿಯಲ್ಲಿ ಎಲ್‌ಟಿಐಮಿಂಡ್‌ಟ್ರೀ, ಬ್ರಿಟಾನಿಯಾ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಲೈಫ್, ಟೈಟಾನ್ ಕಂಪನಿ ಸ್ಟಾಕ್ ಇಳಿಕೆ ಕಂಡಿದೆ. ಮೆಟಲ್, ರಿಯಾಲಿಟಿ ಸ್ಟಾಕ್ ಶೇಕಡ 1ರಷ್ಟು ಕುಸಿತ ಕಂಡಿದೆ.
ಇಂದು ಹಿಂಡನ್‌ಬರ್ಗ್ ವರದಿಯ ವಿರುದ್ಧವಾಗಿ ಗೌತಮ್ ಅದಾನಿ ಷೇರುದಾರರ ಮುಂದೆ ಭಾಷಣವನ್ನು ಮಾಡಿದ್ದಾರೆ. ಅದಾದ ಬಳಿಕ ಅದಾನಿ ಷೇರುಗಳು ಕೂಡಾ ಏರಿಕೆಯನ್ನು ಕಂಡಿದೆ. ವಹಿವಾಟಿನ ಅಂತ್ಯದಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸ್ಟಾಕ್ ಶೇಕಡ 0.31ರಷ್ಟು ಜಿಗಿದು 2,416 ರೂಪಾಯಿ ಆಗಿದೆ. ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಸ್ಟಾಕ್ ಶೇಕಡ 1.43ರಷ್ಟು ಏರಿಕೆಯಾಗಿ 781.50 ರೂಪಾಯಿಗೆ ತಲುಪಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸ್ಟಾಕ್ ಶೇಕಡ 0.70ರಷ್ಟು ಹೆಚ್ಚಳವಾಗಿ 972.05 ರೂಪಾಯಿಗೆ ತಲುಪಿದೆ. ಇನ್ನು ಅದಾನಿ ವಿಲ್ಮಾರ್ ಲಿಮಿಟೆಡ್ ಷೇರು ಸುಮಾರು ಶೇಕಡ 0.84ರಷ್ಟು ಜಿಗಿತ ಕಂಡು 406 ರೂಪಾಯಿ ಆಗಿದೆ. ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ಶೇಕಡ 0.69ರಷ್ಟು ಏರಿಕೆಯಾಗಿ, 247.40 ರೂಪಾಯಿಗೆ ತಲುಪಿದೆ.


Click it and Unblock the Notifications