ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ (ಜೂನ್ 15, 2020) ದಿನದ ಆರಂಭದ ಒಂದು- ಒಂದೂವರೆ ಗಂಟೆ ವಹಿವಾಟಿನಲ್ಲಿ ಭಾರೀ ನಷ್ಟ ಕಂಡಿವೆ. ಬೆಳಗ್ಗೆ 10.35ರ ಹೊತ್ತಿಗೆ ಸೆನ್ಸೆಕ್ಸ್ ಸೂಚ್ಯಂಕವು 567.66 ಅಂಶಗಳ ಇಳಿಕೆ ಕಂಡು 33,213.23 ಪಾಯಿಂಟ್ ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 154 ಪಾಯಿಂಟ್ ಕುಸಿದು, 9818.90ರಲ್ಲಿ ವ್ಯವಹಾರ ನಡೆಸುತ್ತಿತ್ತು.
ಎರಡನೇ ಸುತ್ತಿನ ಕೊರೊನಾ ವೈರಾಣುವಿನ ಅಬ್ಬರ, ಏಷ್ಯನ್ ಷೇರು ಮಾರುಕಟ್ಟೆಗಳ ದೌರ್ಬಲ್ಯ ಇತರ ಕಾರಣಗಳಿಗಾಗಿ ಫಾರ್ಮಾಸ್ಯುಟಿಕಲ್ ವಲಯ ಹೊರತುಪಡಿಸಿ, ಉಳಿದೆಲ್ಲವೂ ಇಳಿಕೆ ಕಂಡಿದೆ. ಇನ್ನು ಬ್ಯಾಂಕ್ ನಿಫ್ಟಿ ಸಹ 500ಕ್ಕೂ ಹೆಚ್ಚು ಪಾಯಿಂಟ್ ಗಳ ಕುಸಿತ ಕಂಡಿದೆ.

ಆದರೂ ನಿಫ್ಟಿಯಲ್ಲಿ ಹಿಂಡಾಲ್ಕೋ, ಜೀ ಎಂಟರ್ ಟೇನ್ ಮೆಂಟ್, ವೇದಾಂತ, ಐಷರ್ ಮೋಟಾರ್ ಹಾಗೂ ವಿಪ್ರೋ ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್ ಹಾಗೂ ಟಾಟಾ ಸ್ಟೀಲ್ ಷೇರುಗಳು ಇಳಿಕೆ ಕಂಡಿವೆ.


Click it and Unblock the Notifications