ಭಾರತೀಯ ಷೇರುಪೇಟೆ ಸತತ ಎರಡು ವಹಿವಾಟುಗಳಲ್ಲಿ ಕುಸಿತದ ಬಳಿಕ ಗುರುವಾರ (ಮೇ 20) ಸಕಾರಾತ್ಮಕವಾಗಿ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 159 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 30 ಪಾಯಿಂಟ್ಸ್ ಹೆಚ್ಚಳಗೊಂಡು 15 ಸಾವಿರ ಗಡಿಯಲ್ಲಿದೆ
ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.32ರಷ್ಟು ಅಥವಾ 159.12 ಪಾಯಿಂಟ್ಸ್ ಏರಿಕೆಗೊಂಡು 50061.76ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.20ರಷ್ಟು ಅಥವಾ 30.50 ಪಾಯಿಂಟ್ ಏರಿಕೆಗೊಂಡು 15060.70 ಕ್ಕೆ ಏರಿದೆ.

ದಿನದ ವಹಿವಾಟು ಆರಂಭಗೊಂಡಾಗ 1133 ಷೇರುಗಳು ಏರಿಕೆಗೊಂಡರೆ, 304 ಷೇರುಗಳು ಕುಸಿದವು, ಮತ್ತು 64 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಷೇರುಗಳು:
ಯುಪಿಎಲ್ ಷೇರು ಸುಮಾರು 9 ರೂ.ಗಳ ಏರಿಕೆ ಕಂಡು 791.35 ರೂ., ಟೈಟಾನ್ ಕಂಪನಿಯ ಷೇರುಗಳು ತಲಾ 15 ರೂ.ಗಳಷ್ಟು ಏರಿಕೆಯಾಗಿ 1,536.60 ರೂ., ಐಒಸಿ ಷೇರುಗಳು ಸುಮಾರು 1 ರೂ.ಗಳ ಏರಿಕೆ ಕಂಡು 107.90 ರೂ., ಲಾರ್ಸೆನ್ ಷೇರು ಸುಮಾರು 14 ರೂ.ಗಳಿಂದ 1,417.00 ರೂ., ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 5 ರೂ.ಗಳ ಏರಿಕೆ ಕಂಡು 630.70 ರೂ. ಗಳ ಲಾಭದೊಂದಿಗೆ ತೆರೆಯಿತು.
ಇಳಿಕೆಗೊಂಡ ಷೇರುಗಳು:
ಹಿಂಡಾಲ್ಕೊ ಷೇರುಗಳು ಸುಮಾರು 13 ರೂ.ಗಳಷ್ಟು ಕುಸಿದು 390.15 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 32 ರೂ.ಗಳ ಕುಸಿತ ಕಂಡು 1,132.60 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 11 ರೂ.ಗಳ ಕುಸಿತ ಕಂಡು 694.45 ರೂ., ಆಕ್ಸಿಸ್ ಬ್ಯಾಂಕ್ ಷೇರುಗಳು 6 ರೂ.ಗಳ ಕುಸಿತ ಕಂಡು 710.95 ರೂ., ಬ್ರಿಟಾನಿಯದ ಷೇರುಗಳು ಸುಮಾರು 30 ರೂ.ಗಳಿಂದ 3,504.90 ರೂ. ತಲುಪಿದೆ.


Click it and Unblock the Notifications