For Quick Alerts
ALLOW NOTIFICATIONS  
For Daily Alerts

ಸತತ 2 ದಿನ ಕುಸಿದಿದ್ದ ಸೆನ್ಸೆಕ್ಸ್ 200 ಪಾಯಿಂಟ್ಸ್‌ ಏರಿಕೆ, ನಿಫ್ಟಿ 50 ಪಾಯಿಂಟ್ಸ್ ಹೆಚ್ಚಳ

|

ಸತತ ಎರಡು ವಹಿವಾಟುಗಳಲ್ಲಿ ಕುಸಿತಕ್ಕೆ ಸಾಕ್ಷಿಯಾಗಿದ್ದ ಭಾರತೀಯ ಷೇರುಗಳು ಶುಕ್ರವಾರ ಪುಟಿದೆದ್ದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 194 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 50 ಪಾಯಿಂಟ್ಸ್‌ ಹೆಚ್ಚಾಗಿದೆ.

 

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ಜೂನ್ 18ರಂದು ಎಷ್ಟಾಗಿದೆ?ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: ಜೂನ್ 18ರಂದು ಎಷ್ಟಾಗಿದೆ?

ಬೆಳಿಗ್ಗೆ 9.16ರ ಸುಮಾರಿಗೆ ಸೆನ್ಸೆಕ್ಸ್‌ 194.38 ಪಾಯಿಂಟ್ಸ್ ಅಥವಾ ಶೇಕಡಾ 0.37ರಷ್ಟು ಹೆಚ್ಚಾಗಿ 52517.71 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.60 ಪಾಯಿಂಟ್ಸ್ ಅಥವಾ ಶೇಕಡಾ 0.32ರಷ್ಟು ಏರಿಕೆಗೊಂಡು 15742 ಪಾಯಿಂಟ್ಸ್‌ ಮುಟ್ಟಿದೆ.

 

ದಿನದ ವಹಿವಾಟು ಆರಂಭಗೊಂಡಾಗ 1371 ಷೇರುಗಳು ಏರಿಕೆಗೊಂಡಿದ್ದು, 372 ಷೇರುಗಳು ಕುಸಿದಿವೆ ಮತ್ತು 45 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸತತ 2 ದಿನ ಕುಸಿದಿದ್ದ ಸೆನ್ಸೆಕ್ಸ್ 200 ಪಾಯಿಂಟ್ಸ್‌ ಏರಿಕೆ

ಮಾರ್ಚ್ 31, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ಸ್ವತಂತ್ರ ನಿವ್ವಳ ಲಾಭವನ್ನು 129.12 ಕೋಟಿ ರೂ.ಗೆ ವರದಿ ಮಾಡಿದ ನಂತರ ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಷೇರುಗಳು ಏರಿಕೆ ದಾಖಲಿಸಿವೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ನಂತರದ ಸ್ವತಂತ್ರ ಲಾಭವನ್ನು 73.55 ಕೋಟಿ ರೂ. ವರದಿ ಮಾಡಿತ್ತು.

ಮಾರ್ಚ್ 2021 ರ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ಶೇಕಡಾ 6ರಷ್ಟು ಹೆಚ್ಚಾಗಿ 3,526.23 ಕೋಟಿ ರೂ.ಗೆ ಏರಿಕೆಯಾದ ನಂತರ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕೂಡ ತನ್ನ ಷೇರುಗಳ ಮೌಲ್ಯ ಹೆಚ್ಚಾಗಿದೆ.

ಆದರೆ ಇದೇ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ 20.1 ರಷ್ಟು ಕುಸಿತವನ್ನು 22.07 ಕೋಟಿ ರೂ.ಗೆ ದಾಖಲಿಸಿದ ನಂತರ ಹಿಂದೂಸ್ತಾನ್ ಮೀಡಿಯಾ ವೆಂಚರ್ಸ್ ಷೇರುಗಳು ಶೇ. 1ರಷ್ಟು ಕುಸಿದವು.

English summary

Sensex Nifty Open Higher After 2 Day Losses

Sensex was up 194.38 points or 0.37% at 52517.71, and the Nifty was up 50.60 points or 0.32% at 15742.
Story first published: Friday, June 18, 2021, 9:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X