ಭಾರತೀಯ ಷೇರುಪೇಟೆಯು ಸೋಮವಾರ ಭಾರೀ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 900 ಪಾಯಿಂಟ್ಸ್ ಇಳಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 245 ಪಾಯಿಂಟ್ಸ್ ಕುಸಿತಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ 10.08ರ ಸುಮಾರಿಗೆ ಶೇಕಡಾ 1.80ರಷ್ಟು ಅಥವಾ 899.59 ಪಾಯಿಂಟ್ಸ್ ಕುಸಿತಗೊಂಡು 49,130 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ಶೇಕಡಾ 1.65ರಷ್ಟು ಅಥವಾ 245.30 ಪಾಯಿಂಟ್ಸ್ ಇಳಿಕೆಗೊಂಡು 14622 ಪಾಯಿಂಟ್ಸ್ ತಲುಪಿದೆ. ಆರಂಭಿಕವಾಗಿ 799 ಷೇರುಗಳು ಏರಿಕೆಗೊಂಡರೆ, 1522 ಷೇರುಗಳು ಕುಸಿದವು, ಮತ್ತು 147 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇನಲ್ಲಿ ಏರಿಕೆಗೊಂಡ ಷೇರುಗಳು
ಬ್ರಿಟಾನಿಯಾ ಷೇರುಗಳು ಸುಮಾರು 23 ರೂ.ಗಳ ಏರಿಕೆ ಕಂಡು 3,641.00 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 2 ರೂ.ಗಳ ಏರಿಕೆ ಕಂಡು 510.90 ರೂ., ಇನ್ಫೋಸಿಸ್ ಷೇರುಗಳು ಸುಮಾರು 6 ರೂಪಾಯಿ ಹೆಚ್ಚಾಗಿ 1,391.00 ರೂ., ಎಚ್‌ಸಿಎಲ್ ಟೆಕ್ ಷೇರು ಸುಮಾರು 3 ರೂ ಗಳಿಸಿ 1,006.05 ರೂ., ವಿಪ್ರೋ ಷೇರುಗಳು 1 ರೂ.ನಿಂದ 417.40 ರೂಗಳಿಗೆ ತೆರೆದಿವೆ.
ಇಳಿಕೆಗೊಂಡ ಷೇರುಗಳು
ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 122 ರೂ.ಗಳನ್ನು ಕಳೆದುಕೊಂಡು 5,149.55 ರೂ., ಈಚರ್ ಮೋಟಾರ್ಸ್ ಷೇರುಗಳು 57 ರೂ.ಗಳನ್ನು ಕಳೆದುಕೊಂಡು 2,574.00 ರೂ., ಇಂಡಸ್ಇಂಡ್ ಬ್ಯಾಂಕಿನ ಷೇರುಗಳು ಸುಮಾರು 18 ರೂ.ಗಳ ಕುಸಿತದಿಂದ 974.95 ರೂಗಳಲ್ಲಿ ಪ್ರಾರಂಭವಾಯಿತು. ಬಜಾಜ್ ಆಟೋ ಷೇರುಗಳು ಸುಮಾರು 55 ರೂ.ಗಳನ್ನು ಕಳೆದುಕೊಂಡು 3,688.30 ರೂ., ಆಕ್ಸಿಸ್ ಬ್ಯಾಂಕ್ ಷೇರುಗಳು ಸುಮಾರು 10 ರೂ. ಕುಸಿದು 703.10 ರೂ. ತಲುಪಿದೆ.


Click it and Unblock the Notifications