ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ನವೆಂಬರ್ 9, 2020) ಏರಿಕೆ ದಾಖಲಿಸಿವೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ನಂತರ ಪ್ರಬಲವಾದ ಜಾಗತಿಕ ಪ್ರಭಾವ ಹಾಗೂ ಭಾರತೀಯ ಮಾರುಕಟ್ಟೆಗೆ ಸುಸ್ಥಿರವಾದ ವಿದೇಶಿ ಹೂಡಿಕೆ ಕಾರಣಕ್ಕೆ ಈ ಬೆಳವಣಿಗೆ ಆಗಿದೆ.
ಬಿಎಸ್ ಇ ಸೆನ್ಸೆಕ್ಸ್ ದಿನದ ಕೊನೆಗೆ 1.68 ಪರ್ಸೆಂಟ್ ಹೆಚ್ಚಳವಾಗಿ, 42,597.43 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ಎನ್ ಎಸ್ ಇ ನಿಫ್ಟಿ 50 1.68 ಪರ್ಸೆಂಟ್ ಏರಿಕೆಯಾಗಿ 12,469.20 ಪಾಯಿಂಟ್ ನೊಂದಿಗೆ ವಹಿವಾಟು ಪೂರ್ಣಗೊಳಿಸಿದೆ. ಎಲ್ಲ ವಲಯಗಳು ಏರಿಕೆಯನ್ನೇ ದಾಖಲಿಸಿವೆ.
ಈ ದಿನ ನಿಫ್ಟಿ ಹಾಗೂ ಸೆನ್ಸೆಕ್ಸ್ ಎರಡೂ ಸಾರ್ವಕಾಲಿಕ ದಾಖಲೆ ಬರೆದವು. ಸೆನ್ಸೆಕ್ಸ್ 42,645.33 ಪಾಯಿಂಟ್ ಹಾಗೂ ನಿಫ್ಟಿ 12,474.05 ಪಾಯಿಂಟ್ ಮುಟ್ಟಿತು. ಇನ್ನು ಡಿವೀಸ್ ಲ್ಯಾಬೊರೇಟರೀಸ್ ಹೊಸ ದಾಖಲೆ ಬರೆದು, 3463.40 ರುಪಾಯಿ ತಲುಪಿತು. ಈ ಮಧ್ಯೆ ಐಸಿಐಸಿಐ ಬ್ಯಾಂಕ್ 5 ಪರ್ಸೆಂಟ್ ಏರಿಕೆ ಕಂಡು, 464 ರುಪಾಯಿ ಮುಟ್ಟಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಡಿವೀಸ್ ಲ್ಯಾಬ್ಸ್
ಇಂಡಸ್ ಇಂಡ್ ಬ್ಯಾಂಕ್
ಭಾರ್ತಿ ಏರ್ ಟೆಲ್
ಐಸಿಐಸಿಐ ಬ್ಯಾಂಕ್
ಆಕ್ಸಿಸ್ ಬ್ಯಾಂಕ್

ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು
ಸಿಪ್ಲಾ
ಅದಾನಿ ಪೋರ್ಟ್ಸ್
ಐಟಿಸಿ
ಮಾರುತಿ ಸುಜುಕಿ
ಡಾ ರೆಡ್ಡೀಸ್ ಲ್ಯಾಬ್ಸ್


Click it and Unblock the Notifications