For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ದಾಖಲೆಯ ಓಟ: ಇನ್ಫೋಸಿಸ್ ಷೇರುಗಳ ಮೇಲೆ ಎಲ್ಲರ ಕಣ್ಣು

|

ಸೋಮವಾರ ಆರಂಭದಲ್ಲೇ ಷೇರು ಮಾರುಕಟ್ಟೆಯು ಭರ್ಜರಿ ಆರಂಭ ಕಂಡಿದೆ. ಸೆನ್ಸೆಕ್ಸ್ ದಾಖಲೆಯ ಓಟ ಕಂಡಿದ್ದು, ನಿಫ್ಟಿ ಸಾರ್ವಕಾಲಿಕ ದಾಖಲೆ ಮಾಡಿದೆ. ಮುಂಬೈ ಷೇರು ಮಾರುಕಟ್ಟೆ (ಬಿಎಸ್ಐ) 250 ಅಂಶಗಳ ಏರಿಕೆ ದಾಖಲಿಸಿದೆ.

 

ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ ದಾಖಲೆಯ ಮಟ್ಟಕ್ಕೆ ತಲುಪಿದ್ದು 0.5 ಪರ್ಸೆಂಟ್ ಏರಿಕೆಯಾಗಿ 12,320 ಅಂಶಗಳಿಗೆ ತಲುಪಿದೆ. ಸೆನ್ಸೆಕ್ಸ್ 250 ಅಂಶಗಳು ಏರಿಕೆಗೊಂಡು 41,868 ಅಂಶಗಳನ್ನು ಮುಟ್ಟಿತು.

 
ಸೆನ್ಸೆಕ್ಸ್, ನಿಫ್ಟಿ ದಾಖಲೆಯ ಓಟ:ಇನ್ಫೋಸಿಸ್ ಷೇರುಗಳ ಮೌಲ್ಯ ಏರಿಕೆ

ಇನ್ಫೋಸಿಸ್ ಕಂಪನಿಯು ಕಳೆದ ಶುಕ್ರವಾರ (ಜನವರಿ 10) 2019-20ರ ಮೂರನೇ ತ್ರೈಮಾಸಿಕ ಹಣಕಾಸು ವರದಿಯನ್ನು ಬಿಡುಗಡೆಗೊಳಿಸಿತ್ತು. ಪರಿಣಾಮ ಇನ್ಫೋಸಿಸ್ ಷೇರುಗಳು ಸೋಮವಾರ ಷೇರು ಮಾರುಕಟ್ಟೆಯಲ್ಲಿ 3 ಪರ್ಸೆಂಟ್ ಏರಿಕೆ ಸಾಧಿಸಿವೆ. ಇನ್ಪೋಸಿಸ್ ಕಂಪನಿಯ ನಿವ್ವಳ ಲಾಭ 4,457 ಕೋಟಿ ರುಪಾಯಿಗೆ ಏರಿಕೆಗೊಂಡಿದೆ. ಹೀಗಾಗಿ ಷೇರು ಹೂಡಿಕೆದಾರರು ಇನ್ಫೋಸಿಸ್ ಕಂಪನಿಯ ಷೇರುಗಳ ವಹಿವಾಟಿನಲ್ಲಿ ಹೆಚ್ಚು ಆಸಕ್ತಿ ತೋರಿದ್ದಾರೆ.

ಇನ್ಫೋಸಿಸ್ ಜೊತೆಗೆ ಟಾಟಾ ಸ್ಟೀಲ್, ವಿಪ್ರೋ, ಐಸಿಐಸಿಐ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಬಜಾಜ್ ಫಿನಾನ್ಸ್, ಸನ್ ಫಾರ್ಮ ಕಂಪನಿಯ ಷೇರುಗಳು ಲಾಭಗಳಿಸಿದ್ದು, ಯೆಸ್ ಬ್ಯಾಂಕ್, ಟಾಟಾ ಮೋಟಾರ್ಸ್ , ಡಾ.ರೆಡ್ಡಿ ಲ್ಯಾಬ್ಸ್ ಷೇರುಗಳು ಆರಂಭದಲ್ಲಿ ಇಳಿಕೆ ಕಂಡಿವೆ.

English summary

Sensex, Nifty Record High, Infosys 3 Percent Gain

Indian markets hit record highs today with benchmark indices Sensex and Nifty rising in early trade
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X