ಭಾರತೀಯ ಷೇರುಪೇಟೆ ಸಕಾರಾತ್ಮಕವಾಗಿ ಏರಿಕೆ ಮುಂದುವರಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಹೊಸ ದಾಖಲೆಯ ಮಟ್ಟವನ್ನೇ ತಲುಪಿ ಬಿಟ್ಟಿದೆ. ದಿನದ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 235 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 73.90 ಪಾಯಿಂಟ್ಸ್ ಹೆಚ್ಚಾಗಿದೆ.
ಬೆಳಿಗ್ಗೆ 9.18ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 235.39 ಪಾಯಿಂಟ್ಸ್ ಅಥವಾ ಶೇಕಡಾ 0.45ರಷ್ಟು ಏರಿಕೆಗೊಂಡು 52608.08 ಪಾಯಿಂಟ್ಸ್ ಮುಟ್ಟಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 73.90 ಪಾಯಿಂಟ್ಸ್ ಅಥವಾ ಶೇಕಡಾ 0.47ರಷ್ಟು ಹೆಚ್ಚಾಗಿ 15766.50 ಪಾಯಿಂಟ್ಸ್ ತಲುಪಿದೆ.

ದಿನದ ವಹಿವಾಟು ಆರಂಭಗೊಂಡಾಗ 1,507 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 1,205 ಷೇರುಗಳು ಏರಿಕೆಗೊಂಡರೆ, 234 ಕುಸಿದವು. ಅದೇ ಸಮಯದಲ್ಲಿ, 68 ಕಂಪನಿಗಳ ಷೇರು ಬೆಲೆ ಯಾವುದೇ ವ್ಯತ್ಯಾಸಗೊಂಡಿಲ್ಲ.
ಏರಿಕೆಗೊಂಡ ಷೇರುಗಳು:
ಐಸಿಐಸಿಐ ಬ್ಯಾಂಕಿನ ಷೇರುಗಳು 8 ರೂ. ಏರಿಕೆಗೊಂಡು 654.70 ರೂ. ಪ್ರಾರಂಭವಾಗಿದ್ದು, ಶ್ರೀ ಸಿಮೆಂಟ್‌ನ ಷೇರು 269 ರೂ.ಗಳ ಏರಿಕೆ ಕಂಡು 28,303.45 ರೂ. ಹಿಂಡಾಲ್ಕೊ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 392.50 ರೂ., ಬಜಾಜ್ ಫೈನಾನ್ಸ್ ಷೇರುಗಳು 49 ರೂ.ಗಳ ಏರಿಕೆ ಕಂಡು 6,198.50 ರೂ., ಟಾಟಾ ಸ್ಟೀಲ್ ಷೇರುಗಳು 9 ರೂ.ಗಳ ಏರಿಕೆ ಕಂಡು 1,236.35 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಅದಾನಿ ಪೋರ್ಟ್ಸ್ ಷೇರು 6 ರೂ. ಹೆಚ್ಚಾಗಿ 711.70 ರೂ. ಗೆ ಪ್ರಾರಂಭವಾಯಿತು, ಟೆಕ್ ಮಹೀಂದ್ರಾ ಷೇರುಗಳು ಸುಮಾರು 4 ರೂ.ಗಳಷ್ಟು ಇಳಿಕೆಯಾಗಿ 1,052.95 ರೂ., ಬಜಾಜ್ ಫಿನ್‌ಸರ್ವ್‌ನ ಷೇರುಗಳು 29 ರೂ. ಹೆಚ್ಚಾಗಿ 12,880.00 ಕ್ಕೆ ಪ್ರಾರಂಭವಾಗಿದ್ದು, ಎಚ್‌ಸಿಎಲ್ ಟೆಕ್ ಷೇರುಗಳು ಸುಮಾರು 1 ರೂ.ಗೆ ಇಳಿದು 978.95 ರೂ. ಮುಟ್ಟಿದೆ ಮತ್ತು ಇನ್ಫೋಸಿಸ್ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 1,543.15 ರೂ. ತಲುಪಿದೆ.


Click it and Unblock the Notifications