ಭಾರತೀಯ ಷೇರುಪೇಟೆಯು ಸೋಮವಾರ ಸಕಾರಾತ್ಮಕ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 289 ಪಾಯಿಂಟ್ಸ್ ಜಿಗಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 89 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ 9.16ರ ಸುಮಾರಿಗೆ 289.24 ಪಾಯಿಂಟ್ಸ್ ಅಥವಾ ಶೇಕಡಾ 0.59ರಷ್ಟು ಏರಿಕೆಗೊಂಡು 49495.71 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 98.90 ಪಾಯಿಂಟ್ಸ್ ಅಥವಾ ಶೇಕಡಾ 0.67ರಷ್ಟು ಏರಿಕೆಗೊಂಡು 14922 ಪಾಯಿಂಟ್ಸ್ ಮುಟ್ಟಿದೆ.

ಆರಂಭಿಕ ವಹಿವಾಟಿನಲ್ಲಿ ಇಂದು ಸುಮಾರು 1,331 ಷೇರುಗಳು ಏರಿಕೆಗೊಂಡರೆ, 284 ಷೇರುಗಳು ಕುಸಿದವು, ಮತ್ತು 77 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಟಾಟಾ ಸ್ಟೀಲ್ ಷೇರುಗಳು ಸುಮಾರು 32 ರೂ. ಏರಿಕೆಗೊಂಡು 1,214.75 ರೂ., ಡಾ. ರೆಡ್ಡಿಸ್ ಲ್ಯಾಬ್‌ನ ಷೇರು ಸುಮಾರು 136 ರೂ. ಹೆಚ್ಚಾಗಿ 5,310.60 ರೂ., ಹಿಂಡಾಲ್ಕೊ ಷೇರುಗಳು ಸುಮಾರು 8 ರೂಪಾಯಿ ಏರಿಕೆಗೊಂಡು 408.90 ರೂ., ಯುಪಿಎಲ್‌ನ ಷೇರುಗಳು ಸುಮಾರು 12 ರೂ.ಗಳ ಲಾಭದೊಂದಿಗೆ 641.50 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 12 ರೂ.ಗಳಿಂದ 769.30 ರೂ. ತಲುಪಿದೆ.


Click it and Unblock the Notifications