ಶುಕ್ರವಾರ ಕೊಂಚ ಚೇತರಿಕೆ ಕಂಡಿದ್ದ ಷೇರುಪೇಟೆ ಮತ್ತು ಕರಡಿ ಕುಣಿತಕ್ಕೆ ಸಾಕ್ಷಿಯಾಗಿದೆ. ಸೋಮವಾರ (ಮಾರ್ಚ್ 16)ರಂದು ಸೆನ್ಸೆಕ್ಸ್ ಬರೋಬ್ಬರಿ 2,713.41 ಪಾಯಿಂಟ್ಸ್ ಇಳಿಕೆ ಕಂಡಿದ್ದು, ಎನ್‌ಎಸ್‌ಇ ಸೂಚ್ಯಕ ನಿಫ್ಟಿ 9,200 ಪಾಯಿಂಟ್ಸ್‌ಗಳಿಗಿಂತ ಕೆಳಗಿಳಿದಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ 7.96 ಪರ್ಸೆಂಟ್ ಅಥವಾ 2,713.41 ಪಾಯಿಂಟ್ಸ್ ಇಳಿಕೆಗೊಂಡು ವಹಿವಾಟು ಕೊನೆಗೊಂಡಾಗ 31,390.07 ಅಂಶಗಳಿಗೆ ತಲುಪಿದೆ. ಇನ್ನು ಎನ್‌ಎಸ್‌ಇ ಸೂಚ್ಯಕ ನಿಫ್ಟಿ ಕೂಡ 7.61 ಪರ್ಸೆಂಟ್ ಅಥವಾ 757.80 ಪಾಯಿಂಟ್ಸ್ ಇಳಿಕೆಗೊಂಡು 9197.40 ಅಂಶಗಳಿಗೆ ಮುಟ್ಟಿದೆ. ಒಟ್ಟಾರೆ 437 ಕಂಪನಿಯ ಷೇರುಗಳು ಏರಿಕೆಗೊಂಡರೆ, 1987 ಕಂಪನಿಯ ಷೇರುಗಳು ನಷ್ಟ ಅನುಭವಿಸಿವೆ.

ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಯ ಷೇರುಗಳು:
ಇಂಡಸ್‌ಲ್ಯಾಂಡ್ ಬ್ಯಾಂಕ್, ಜಿಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ವೇದಾಂತ, ಹೆಚ್‌ಡಿಎಫ್‌ಸಿ, ಅದಾನಿ ಪೋರ್ಟ್ಸ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೊ, ಐಟಿಸಿ, ಇನ್ಫೋಸಿಸ್, ಜೀ ಎಂಟರ್‌ಟೈನ್‌ಮೆಂಟ್ ಷೇರುಗಳು 9 ಪರ್ಸೆಂಟ್‌ಗೂ ಅಧಿಕ ನಷ್ಟು ಕಂಡಿವೆ.
ಸೋಮವಾರ ಬಹುತೇಕ ಕಂಪನಿಯ ಷೇರುಗಳು ನಷ್ಟ ಅನುಭವಿಸಿದ್ದು, ಯೆಸ್ ಬ್ಯಾಂಕ್ ಷೇರು ಮಾತ್ರ 45.21 ಪರ್ಸೆಂಟ್ ಏರಿಕೆಗೊಂಡಿದೆ. ಕಳೆದ ವಹಿವಾಟಿನಲ್ಲಿ 25.55 ರುಪಾಯಿಗೆ ಕೊನೆಗೊಂಡಿದ್ದ ಯೆಸ್ ಬ್ಯಾಂಕ್ ಷೇರು 11.55 ರುಪಾಯಿ ಏರಿಕೆಗೊಂಡು 37.10 ರುಪಾಯಿ ತಲುಪಿದೆ.


Click it and Unblock the Notifications