ಭಾರತೀಯ ಷೇರುಪೇಟೆಯು ಮಂಗಳವಾರ ಏರುಮುಖದೊಂದಿಗೆ ಸಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 280 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 78 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 280 ಪಾಯಿಂಟ್ಸ್ ಅಥವಾ ಶೇಕಡಾ 0.56ರಷ್ಟು ಹೆಚ್ಚಳಗೊಂಡು 50,051.44 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 78 ಪಾಯಿಂಟ್ಸ್ಸ ಅಥವಾ ಶೇಕಡಾ 0.53ರಷ್ಟು ಏರಿಕೆಗೊಂಡು 14,814.75 ಪಾಯಿಂಟ್ಸ್ ತಲುಪಿದೆ.

ಎನ್‌ಎಸ್‌ಇನಲ್ಲಿ ಅದಾನಿ ಎಂಟರ್‌ಪ್ರೈಸಸ್, ಶ್ರೀ ಸಿಮೆಂಟ್ಸ್, ಪೇಜ್ ಇಂಡಸ್ಟ್ರೀಸ್, ಬಂದನ್ ಬ್ಯಾಂಕ್, ಮದರ್‌ಸನ್ ಸುಮಿ ಏರಿಕೆಗೊಂಡ ಷೇರುಗಳಾಗಿದ್ದು, ಹಿಂಡಾಲ್ಕೊ, ಒನ್‌ಎನ್‌ಜಿಸಿ, ಗೇಲ್, ಐಟಿಸಿ, ಎನ್‌ಟಿಪಿಸಿ, ಎಂ&ಎಂ, ಹೀರೋ ಮೊಟೊಕಾಪ್, ಹೆಚ್‌ಡಿಎಫ್‌ಸಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಪ್ರಮುಖವಾಗಿ ಇಳಿಕೆಗೊಂಡಿವೆ.
ನಿಫ್ಟಿ ಮೆಟಲ್, ಎಫ್‌ಎಂಸಿಜಿ ಮತ್ತು ಮೀಡಿಯಾ ಕೆಂಪು ಬಣ್ಣದಲ್ಲಿ ಕೊನೆಗೊಂಡರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ .2.91, ನಿಫ್ಟಿ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ತಲಾ 1.73 ರಷ್ಟು ಜಿಗಿದಿದೆ.


Click it and Unblock the Notifications