ಸುಮಾರು ನಾಲ್ಕು ತಿಂಗಳುಗಳ ಬಳಿಕ ಬುಧವಾರ ಷೇರು ಮಾರುಕಟ್ಟೆ ಭಾರೀ ಏರಿಕೆಯನ್ನು ಕಂಡಿದೆ. ಏಪ್ರಿಲ್ ಬಳಿಕ ಮೊದಲ ಬಾರಿಗೆ ಬುಧವಾರ ವಹಿವಾಟಿನ ಆರಂಭದಲ್ಲಿ ಷೇರುಪೇಟೆಯು 60000ಕ್ಕೆ ತಲುಪಿದೆ. ಪ್ರಮುಖವಾಗಿ ಜಾಗತಿಕ ಬೆಳವಣಿಗೆಯು ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 141.62 ಅಂಕ ಏರಿಕೆಯಾಗಿ 59,983.83ಕ್ಕೆ ತಲುಪಿದ್ದು, ಶೀಘ್ರವೇ 165.9 ಅಂಕ ಹೆಚ್ಚಳವಾಗಿ 60,008.11ಕ್ಕೆ ಜಿಗಿದಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 48.25 ಅಂಕ ಏರಿಕೆಯಾಗಿ 17,873.50ಕ್ಕೆ ತಲುಪಿದೆ.
ಮಂಗಳವಾರ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 379.43 ಅಂಕ ಅಥವಾ ಶೇಕಡ 0.64ರಷ್ಟು ಏರಿಕೆಯಾಗಿ 59,842.21ಕ್ಕೆ ತಲುಪಿದೆ. ಇನ್ನು ನಿಫ್ಟಿ 127.10 ಅಂಕ ಅಥವಾ ಶೇಕಡ 0.72ರಷ್ಟು ಹೆಚ್ಚಾಗಿ 17,825.25ಕ್ಕೆ ವಹಿವಾಟು ಅಂತ್ಯ ಮಾಡಿದೆ. ಹಾಗಾದರೆ ಷೇರು ಪೇಟೆ ಬುಧವಾರ ಹೇಗಿದೆ, ಯಾವ ಸ್ಟಾಕ್‌ಗಳು ಏರಿಕೆಯಾಗಿದೆ, ಯಾವ ಸ್ಟಾಕ್‌ಗಳು ಇಳಿಕೆಯಾಗಿದೆ ಎಂದು ತಿಳಿಯೋಣ ಮುಂದೆ ಓದಿ...
ಯಾವೆಲ್ಲಾ ಸ್ಟಾಕ್‌ಗಳು ಏರಿಕೆ ಇಳಿಕೆ
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್‌ನಲ್ಲಿ ಎನ್‌ಟಿಪಿಸಿ, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್ ಪ್ರಮುಖ ಸ್ಟಾಕ್‌ಗಳು ಆಗಿದೆ. ಇನ್ನೊಂದೆಡೆ ಟಾಟಾ ಕನ್ಸಲ್ಟೆಂನ್ಸಿ ಸರ್ವಿಸಸ್, ಇನ್ಫೋಸಿಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಭಾರೀ ನಷ್ಟವನ್ನು ಕಂಡಿದೆ.
ಷೇರುಪೇಟೆ ಹೂಡಿಕೆದಾರರಿಗೆ ಲಾಭ
ಷೇರು ಮಾರುಕಟ್ಟೆ ಸೆನ್ಸೆಕ್ಸ್, ನಿಫ್ಟಿ ಏರಿಕೆಯಾಗುತ್ತಿದ್ದಂತೆ, ಹೂಡಿಕೆದಾರರು ಭಾರೀ ಲಾಭವನ್ನು ಗಳಿಸಿದ್ದಾರೆ. ಷೇರು ಮಾರುಕಟ್ಟೆಯು 25 ಟ್ರಿಲಿಯನ್ ಲಾಭವನ್ನು ಗಳಿಸಿದೆ. ಜುಲೈ 11ರಂದು ಭಾರತದ ಷೇರುಪೇಟೆಯ ಮೌಲ್ಯವು 25,319,892 ಕೋಟಿ ರೂಪಾಯಿ ಆಗಿತ್ತು. ಮಂಗಳವಾರದ ವೇಳೆಗೆ ಮೌಲ್ಯವು 27,792,290 ಕೋಟಿ ರೂಪಾಯಿಗೆ ತಲುಪಿದೆ. ಯುಎಸ್ ಹಣದುಬ್ಬರ ಇಳಿಕೆ, ಫೆಡರಲ್ ಬಡ್ಡಿದರವನ್ನು ತೀವ್ರ ಏರಿಕೆ ಮಾಡದು ಎಂಬ ಸುದ್ದಿಗಳ ನಡುವೆ ಷೇರು ಪೇಟೆಯು ಏರಿಕೆಯನ್ನು ಕಾಣುತ್ತಿದೆ. ಇನ್ನು ಭಾರತದಲ್ಲಿಯೂ ಹಣದುಬ್ಬರವು ಕಡಿಮೆಯಾಗುತ್ತಿದೆ. ಇದು ಹೂಡಿಕೆದಾರರಲ್ಲಿ ಭರವಸೆಯನ್ನು ಹೆಚ್ಚಿಸಿದ್ದು, ಹೆಚ್ಚು ಹೂಡಿಕೆಗೆ ಪ್ರೇರಣೆ ನೀಡಿದೆ.
12 ಗಂಟೆಗೆ ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?
ನಿಫ್ಟಿಯಲ್ಲಿ ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ರಿಲಯನ್ಸ್, ಎಚ್‌ಡಿಎಫ್‌ಸಿ ಲೈಫ್, ಎಚ್‌ಯುಎಲ್ ಷೇರುಗಳು ಏರಿಕೆಯಾಗಿದ್ದರೆ, ಕೋಟಕ್ ಮಹೀಂದ್ರಾ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಂ&ಎಂ, ಎಚ್‌ಡಿಎಫ್‌ಸಿ ಬ್ಯಾಂಕ್, ಅಪೋಲೋ ಹಾಸ್ಪಿಟಲ್ ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು ಸೆನ್ಸೆಕ್ಸ್‌ನಲ್ಲಿ ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಟಿಸಿಎಸ್ ಷೇರು ಹೆಚ್ಚಳವಾಗಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿಮ ಕೋಟಕ್ ಮಹೀಂದ್ರಾ, ಎಸ್‌ಬಿಐ, ಮಾರುತಿ ಸುಜುಕಿ ಸ್ಟಾಕ್‌ಗಳು ಇಳಿಕೆಯಾಗಿದೆ.


Click it and Unblock the Notifications