Opening Bell: ಲೋಹದ ಷೇರು ಚೇತರಿಕೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

ಸೋಮವಾರ ವಹಿವಾಟಿನಲ್ಲಿ ಭಾರೀ ನಷ್ಟ ಕಂಡಿದ್ದ ಲೋಹದ ಷೇರುಗಳು ಇಂದು ಚೇತರಿಕೆ ಕಂಡಿದೆ. ಲೋಹದ ಷೇರುಗಳಲ್ಲಿನ ಚೇತರಿಕೆಯ ಕಾರಣದಿಂದ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳ ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ.

ಕಬ್ಬಿಣದ ಅದಿರು ಮತ್ತು ಗೋಲಿಗಳಂತಹ ಉಕ್ಕಿನ ತಯಾರಿಕೆಯ ಕಚ್ಚಾ ವಸ್ತುಗಳ ಮೇಲೆ ಸರ್ಕಾರವು ಭಾರಿ ರಫ್ತು ಸುಂಕವನ್ನು ವಿಧಿಸಿದೆ. ಕಬ್ಬಿಣದ ಅದಿರುಗಳ ರಫ್ತಿನ ಮೇಲಿನ ತೆರಿಗೆಯನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ. ಕಬ್ಬಿಣದ ಉಂಡೆಗಳ ಮೇಲೆ ಶೇ.45ರಷ್ಟು ಸುಂಕ ವಿಧಿಸಲಾಗಿದೆ.

ಉಕ್ಕಿನ ತಯಾರಿಕೆಯ ಕಚ್ಚಾ ವಸ್ತುಗಳ ಮೇಲೆ ಕೇಂದ್ರವು ರಫ್ತು ಸುಂಕವನ್ನು ವಿಧಿಸಿದ ನಂತರ ಹಿಂದಿನ ವಹಿವಾಟಿನ ಅವಧಿ ಲೋಹದ ಷೇರುಗಳು ತೀವ್ರವಾಗಿ ಕುಸಿತ ಕಂಡಿದ್ದವು. ಆದರೆ ಇಂದು ಆರಂಭಿಕ ವಹಿವಾಟಿನಲ್ಲಿ ಕೊಂಚ ಚೇತರಿಸಿದೆ.

 Opening Bell: ಲೋಹದ ಷೇರು ಚೇತರಿಕೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 121 ಪಾಯಿಂಟ್‌ಗಳು ಅಥವಾ ಶೇಕಡಾ 0.22 ರಷ್ಟು ಏರಿಕೆಯಾಗಿ 54,410 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 20 ಪಾಯಿಂಟ್ ಅಥವಾ 0.12 ರಷ್ಟು ಏರಿಕೆಯಾಗಿ 16,235 ಕ್ಕೆ ವಹಿವಾಟು ಆರಂಭ ಮಾಡಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.36 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.52 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಲಾಭದೊಂದಿಗೆ ವಹಿವಾಟು ಆರಂಭ ಮಾಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 15 ಸೆಕ್ಟರ್‌ನಲ್ಲಿ 11 ಉತ್ತಮ ವಹಿವಾಟು ನಡೆಸಿದೆ.

ಯಾವ ಷೇರು ನಷ್ಟ, ಯಾವ ಷೇರು ಲಾಭ?

ಎಂ&ಎಂ ಸ್ಟಾಕ್ ಶೇಕಡ 1.56 ರಷ್ಟು ಏರಿಕೆಯಾಗಿ 956.55 ರೂಪಾಯಿಗೆ ತಲುಪಿದೆ. ಎಸ್‌ಡಬ್ಲ್ಯು ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಆಟೋ ಮತ್ತು ಕೋಲ್ ಇಂಡಿಯಾ ಸಹ ಲಾಭ ಗಳಿಸಿದವು. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಎಂ & ಎಂ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಪವರ್‌ಗ್ರಿಡ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಕೊಟಕ್ ಮಹೀಂದ್ರಾ ಬ್ಯಾಂಕ್, ಎನ್‌ಟಿಪಿಸಿ ಮತ್ತು ಎಚ್‌ಡಿಎಫ್‌ಸಿ ಲಾಭ ಗಳಿಸಿದೆ.

ಅಲ್ಲದೆ, ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಕೊಂಚ ಏರಿಕೆ ಕಂಡಿದೆ. ಈ ಹಿಂದಿನ ವಹಿವಾಟಿನ ಅಂತ್ಯದಲ್ಲಿ 816.85 ರೂಪಾಯಿಗೆ ವಹಿವಾಟು ಅಂತ್ಯವಾಗಿದ್ದು, ಆದರೆ ಇಂದು ಆರಂಭಿಕ ವಹಿವಾಟಿನಲ್ಲಿ 1.26 ಶೇಕಡ ಏರಿಕೆಯಾಗಿ ರೂಪಾಯಿ 827.15 ಕ್ಕೆ ತಲುಪಿದೆ.

ಇದಕ್ಕೆ ವ್ಯತಿರಿಕ್ತವಾಗಿ ಹಿಂದೂಸ್ತಾನ್ ಯೂನಿಲಿವರ್, ಭಾರ್ತಿ ಏರ್‌ಟೆಲ್, ಟೈಟಾನ್, ಟಿಸಿಎಸ್, ಎಲ್ ಆಂಡ್ ಟಿ, ಇನ್ಫೋಸಿಸ್ ಮತ್ತು ಎಚ್‌ಸಿಎಲ್ ಟೆಕ್ ಶೇರುಗಳು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ಸೋಮವಾರ ಸೆನ್ಸೆಕ್ಸ್ 38 ಪಾಯಿಂಟ್ ಅಥವಾ ಶೇಕಡಾ 0.07 ರಷ್ಟು ಕುಸಿದು 54,289 ಕ್ಕೆ ತಲುಪಿದ್ದರೆ, ನಿಫ್ಟಿ 51 ಪಾಯಿಂಟ್ ಅಥವಾ 0.32 ಶೇಕಡಾ ಕುಸಿದು 16,215 ಕ್ಕೆ ಸ್ಥಿರವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+