ಸೆನ್ಸೆಕ್ಸ್, ನಿಫ್ಟಿ ಜಿಗಿತ: ಆಟೋಮೊಬೈಲ್ ಷೇರು ಏರಿಕೆ

ಆಟೋಮೊಬೈಲ್ ಷೇರುಗಳಲ್ಲಿನ ಲಾಭದ ಕಾರಣದಿಂದ ಆರಂಭಿಕ ವ್ಯವಹಾರಗಳಲ್ಲಿ ಭಾರತೀಯ ಷೇರು ಮಾನದಂಡಗಳು ಸೋಮವಾರ ಹೆಚ್ಚಿನ ವಹಿವಾಟು ನಡೆಸಿದೆ. ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 228 ಪಾಯಿಂಟ್‌ಗಳು ಅಥವಾ ಶೇಕಡಾ 0.42 ರಷ್ಟು ಏರಿಕೆಯಾಗಿ 54,555 ಕ್ಕೆ ತಲುಪಿದೆ ಎನ್‌ಎಸ್‌ಇ ನಿಫ್ಟಿ 55 ಪಾಯಿಂಟ್ ಅಥವಾ 0.34 ರಷ್ಟು ಏರಿಕೆಯಾಗಿ 16,322 ಕ್ಕೆ ವಹಿವಾಟು ನಡೆಸುತ್ತಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.76 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.22 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕೊಂಚ ಚೇತರಿಕೆ ಕಂಡಿದೆ. ನಿಫ್ಟಿ ಆಟೋ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಕ್ರಮವಾಗಿ ಶೇಕಡಾ 2.64 ಮತ್ತು ಶೇಕಡಾ 1.10 ರಷ್ಟು ಏರಿಕೆಯಾಗಿದೆ.

ಮಾರುತಿ ಟಾಪ್ ಗೇನರ್ ಆಗಿದ್ದು, ಷೇರುಗಳು ಶೇಕಡಾ 3.85 ರಷ್ಟು ಏರಿಕೆಯಾಗಿ ರೂಪಾಯಿ 7,878.60 ಕ್ಕೆ ತಲುಪಿದೆ. ಎಂ&ಎಂ, ಹಿರೋ ಮೋಟೋಕಾರ್ಪ್, ಟಾಟಾ ಮೋಟರ್ಸ್, ಎನ್‌ಟಿಪಿಸಿ ಸಹ ಲಾಭವನ್ನು ಗಳಿಸಿದೆ. ಬಿಎಸ್‌ಇಯಲ್ಲಿ 477 ಷೇರುಗಳು ಕುಸಿತ ಕಂಡರೆ, 1,214 ಷೇರುಗಳು ಮುನ್ನಡೆ ಸಾಧಿಸಿದೆ.

 ಸೆನ್ಸೆಕ್ಸ್, ನಿಫ್ಟಿ ಜಿಗಿತ: ಆಟೋಮೊಬೈಲ್ ಷೇರು ಏರಿಕೆ

ಯಾವ ಷೇರು ಹೆಚ್ಚಳ, ಯಾವುದು ನಷ್ಟ?

30-ಷೇರು ಬಿಎಸ್‌ಇ ಸೂಚ್ಯಂಕದಲ್ಲಿ, ಮಾರುತಿ, ಎಂ & ಎಂ, ಏಷ್ಯನ್ ಪೇಂಟ್ಸ್, ಟೈಟಾನ್, ಎನ್‌ಟಿಪಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಡಾ ರೆಡ್ಡೀಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಸನ್ ಫಾರ್ಮಾ ಲಾಭವನ್ನು ಗಳಿಸಿದೆ. ಟಾಟಾ ಸ್ಟೀಲ್, ಐಟಿಸಿ, ಟೆಕ್ ಮಹೀಂದ್ರಾ, ಪವರ್‌ಗ್ರಿಡ್, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟವಾಗಿದೆ.

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಈ ಹಿಂದೆ 826.25 ರೂಪಾಯಿಯಂತೆ ವಹಿವಾಟು ಅಂತ್ಯ ಮಾಡಿದೆ. ಆದರೆ ಇಂದು ವಹಿವಾಟು ಆರಂಭದಲ್ಲಿ 2.21 ಶೇಕಡಾ ಕುಸಿದು ರೂಪಾಯಿ 808ಕ್ಕೆ ತಲುಪಿದೆ. ಎಲ್‌ಐಸಿ ಮೇ 17 ರಂದು ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಸೇಕಡ 8.62ರಷ್ಟು ರಿಯಾಯಿತಿಯಲ್ಲಿ ಪಟ್ಟಿಯಾಗಿದೆ.

ಶುಕ್ರವಾರದಂದು ಸೆನ್ಸೆಕ್ಸ್ 1,534 ಅಂಕಗಳು ಅಥವಾ ಶೇಕಡಾ 2.91 ರಷ್ಟು ಏರಿಕೆಯಾಗಿ 54,326 ಕ್ಕೆ ತಲುಪಿದ್ದರೆ, ನಿಫ್ಟಿ 457 ಪಾಯಿಂಟ್ ಅಥವಾ 2.89 ಶೇಕಡಾ ಏರಿಕೆಯಾಗಿ 16,266 ಕ್ಕೆ ಸ್ಥಿರವಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+