For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಏರಿಕೆ: ಎಲ್‌ಐಸಿ ಲೀಸ್ಟಿಂಗ್ ಮೇಲೆ ಚಿತ್ತ

|

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಮಾರುಕಟ್ಟೆಯ ಚೊಚ್ಚಲ ಪ್ರವೇಶಕ್ಕಾಗಿ ಹೂಡಿಕೆದಾರರು ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳವಾರ ಷೇರು ಮಾರುಕಟ್ಟೆಯ ಬೆಳವಣಿಗೆಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಭಾರತೀಯ ಷೇರುಗಳ ಮಾನದಂಡಗಳು ಮಂಗಳವಾರ ಆರಂಭಿಕ ವ್ಯವಹಾರಗಳಲ್ಲಿ ಹೆಚ್ಚಿನ ವಹಿವಾಟು ನಡೆಸಿವೆ.

ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 254 ಪಾಯಿಂಟ್‌ಗಳು ಅಥವಾ ಶೇಕಡಾ 0.48 ರಷ್ಟು ಜಿಗಿದು 53,228 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 76 ಪಾಯಿಂಟ್ ಅಥವಾ 0.48 ರಷ್ಟು ಏರಿಕೆಯಾಗಿ 15,917 ಕ್ಕೆ ವಹಿವಾಟು ನಡೆಸಿದೆ.

Closing Bell: ನಷ್ಟಕ್ಕೆ ಬ್ರೇಕ್, ಏರಿಕೆಯಾಗಿ ವಹಿವಾಟು ಅಂತ್ಯClosing Bell: ನಷ್ಟಕ್ಕೆ ಬ್ರೇಕ್, ಏರಿಕೆಯಾಗಿ ವಹಿವಾಟು ಅಂತ್ಯ

ನಿಫ್ಟಿ ಮಿಡ್‌ಕ್ಯಾಪ್ 100, ಶೇಕಡಾ 0.63 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.75 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಬಲಗೊಂಡಿದೆ. ನಿಫ್ಟಿ ಮೆಟಲ್, ನಿಫ್ಟಿ ಪ್ರೈವೇಟ್ ಬ್ಯಾಂಕ್ ಮತ್ತು ನಿಫ್ಟಿ ಆಯಿಲ್ ಮತ್ತು ಗ್ಯಾಸ್ ಕ್ರಮವಾಗಿ ಶೇ.2.55, ಶೇ.0.94 ಮತ್ತು ಶೇ.1.23ರಷ್ಟು ಏರಿಕೆಯಾಗುವ ಮೂಲಕ ಸೂಚ್ಯಂಕವನ್ನು ಮೀರಿಸಿದೆ.

 ಸೆನ್ಸೆಕ್ಸ್, ನಿಫ್ಟಿ ಏರಿಕೆ: ಎಲ್‌ಐಸಿ ಲೀಸ್ಟಿಂಗ್ ಮೇಲೆ ಚಿತ್ತ

ಯಾವುದಕ್ಕೆ ಲಾಭ, ಯಾವ ಷೇರಿಗೆ ನಷ್ಟ?

ಹಿಂಡಾಲ್ಕೊ ಟಾಪ್ ಗೇನರ್ ಆಗಿದ್ದು, ಷೇರುಗಳು ಶೇಕಡಾ 4.12 ರಷ್ಟು ಏರಿಕೆಯಾಗಿ ರೂಪಾಯಿ 407.05 ಕ್ಕೆ ತಲುಪಿದೆ. ಒಎನ್‌ಜಿಸಿ, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಕೂಡ ಲಾಭ ಗಳಿಸಿದವು. ಬಿಎಸ್‌ಇಯಲ್ಲಿ 517 ಷೇರುಗಳು ಕುಸಿತ ಕಂಡರೆ 1,831 ಷೇರುಗಳು ಲಾಭವನ್ನು ಗಳಿಸಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟಾಟಾ ಸ್ಟೀಲ್, ಆರ್‌ಐಎಲ್, ಎಂ & ಎಂ, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ, ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಎಚ್‌ಸಿಎಲ್ ಟೆಕ್ ಲಾಭವನ್ನು ಗಳಿಸಿದೆ.

ಆದರೆ ಸನ್ ಫಾರ್ಮಾ, ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ ಮತ್ತು ಟಿಸಿಎಸ್ ಷೇರುಗಳು ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಸೋಮವಾರ ಸೆನ್ಸೆಕ್ಸ್ 180 ಪಾಯಿಂಟ್‌ಗಳು ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 52,974 ಕ್ಕೆ ತಲುಪಿದ್ದರೆ, ನಿಫ್ಟಿ 60 ಪಾಯಿಂಟ್ ಅಥವಾ 0.38 ರಷ್ಟು ಏರಿಕೆಯಾಗಿ 15,842 ಕ್ಕೆ ವಹಿವಾಟು ಅಂತ್ಯ ಮಾಡಿದೆ.

English summary

Sensex Rises Over 250 Points, Nifty Trades Above 15,900

Sensex Rises Over 250 Points, Nifty Trades Above 15,900.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X