ಹಲವಾರು ದಿನಗಳಿಂದ ಷೇರು ಮಾರುಕಟ್ಟೆಯು ಅಸ್ಥಿರವಾಗಿದೆ. ಸುಮಾರು ಆರು ದಿನಗಳಿಂದ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಇಂದು ಕೊಂಚ ಚೇತರಿಸಿಕೊಂಡಿದೆ. ಕಳೆದ ಶುಕ್ರವಾರ ಏರಿಕೆಯೊಂದಿಗೆ ವಹಿವಾಟು ಆರಂಭವಾಗಿದ್ದು, ಆದರೆ ನಷ್ಟದಲ್ಲಿ ವಹಿವಾಟು ಕೊನೆಯಾಗಿದೆ. ಇಂದು (ಮೇ 16) ಷೇರು ಮಾರುಕಟ್ಟೆಯು ಕೊಂಚ ಏರಿಕೆಯೊಂದಿಗೆ ವಹಿವಾಟು ಆರಂಭ ಮಾಡಿದೆ.
ಆರಂಭಿಕ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 344 ಪಾಯಿಂಟ್‌ಗಳು ಅಥವಾ ಶೇಕಡಾ 0.65 ರಷ್ಟು ಜಿಗಿದು 53,138 ಕ್ಕೆ ತಲುಪಿದೆ. ಇದೇ ವೇಳೆ ಎನ್‌ಎಸ್‌ಇ ನಿಫ್ಟಿ 120 ಪಾಯಿಂಟ್‌ಗಳು ಅಥವಾ 0.76 ರಷ್ಟು ಏರಿಕೆಯಾಗಿ 15,902ರಲ್ಲಿ ವ್ಯಾಪಾರ ಆರಂಭ ಮಾಡಿದೆ.
ನಿಫ್ಟಿ ಮಿಡ್‌ಕ್ಯಾಪ್ 100, ಶೇಕಡಾ 0.90 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.64 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕೂಡಾ ಉತ್ತಮವಾಗಿದೆ. ಎಲ್ಲಾ 15 ಸೆಕ್ಟರ್ ಗೇಜ್‌ಗಳು ಉತ್ತಮವಾಗಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ ಮತ್ತು ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡಾ 1.21, 1.52 ಮತ್ತು ಶೇಕಡಾ 2.89 ರಷ್ಟು ಏರಿಕೆಯಾಗುವ ಮೂಲಕ ಶುಭಾರಂಭ ಮಾಡಿದೆ.

ಐಷರ್ ಮೋಟಾರ್ಸ್ ಟಾಪ್ ಗೇನರ್ ಆಗಿದ್ದು, ಷೇರುಗಳು ಶೇಕಡಾ 4.54 ರಷ್ಟು ಏರಿಕೆಯಾಗಿ, 2,543 ರೂಪಾಯಿಗೆ ತಲುಪಿದೆ. ಈ ಸಂದರ್ಭದಲ್ಲೇ ಜೆಎಸ್‌ಡಬ್ಲ್ಯೂ ಸ್ಟೀಲ್, ಅಪೊಲೊ ಹಾಸ್ಪಿಟಲ್ಸ್, ಟಾಟಾ ಸ್ಟೀಲ್ ಮತ್ತು ಟೈಟಾನ್ ಷೇರುಗಳು ಕೂಡ ಲಾಭ ಗಳಿಸಿದೆ.
ಯಾವುದು ಟಾಪ್, ಯಾವ ಷೇರಿಗೆ ನಷ್ಟ?
ಬಿಎಸ್‌ಇಯಲ್ಲಿ 2,146 ಷೇರುಗಳು ಏರಿಕೆ ಕಂಡಿದ್ದರೆ, 678 ಕುಸಿತ ಕಂಡಿದೆ. ಒಟ್ಟಾರೆ ಷೇರು ಮಾರುಕಟ್ಟೆಯು ಏರಿಕೆ ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟಾಟಾ ಸ್ಟೀಲ್, ಟೈಟಾನ್, ಮಾರುತಿ, ಬಜಾಜ್ ಫೈನಾನ್ಸ್, ಎಸ್‌ಬಿಐ, ಎಲ್ & ಟಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಎಂ & ಎಂ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಟಾಪ್ ಗೇನರ್‌ಗಳಲ್ಲಿವೆ. ಈ ಸಂದರ್ಭದಲ್ಲೇ ಅಲ್ಟ್ರಾಟೆಕ್ ಸಿಮೆಂಟ್, ಡಾ ರೆಡ್ಡೀಸ್, ನೆಸ್ಲೆ ಇಂಡಿಯಾ, ಪವರ್‌ಗ್ರಿಡ್, ಇನ್ಫೋಸಿಸ್ ಮತ್ತು ಐಟಿಸಿ ನಷ್ಟವನ್ನು ಅನುಭವಿಸಿ ಕೆಳಕ್ಕೆ ತಳ್ಳಲ್ಪಟ್ಟಿದೆ. ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಕಂಡು ಬಂದಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications