ಕಳೆದ ಹಲವಾರು ದಿನಗಳಿಂದ ಕುಸಿತ ಕಾಣುತ್ತಿದ್ದ ನಿಫ್ಟಿ, ಸೆನ್ಸೆಕ್ಸ್ ಇಂದು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ. ಶುಕ್ರವಾರ ಭಾರತೀಯ ಇಕ್ವಿಟಿಗಳು ಜಿಗಿತ ಕಂಡಿದೆ. ಯುಎಸ್ ಷೇರುಗಳ ಏರಿಕೆ ಬಳಿಕ, ಏಷ್ಯನ್ ಷೇರು ಮಾರುಕಟ್ಟೆ ಏರಿದೆ. ಆದರೂ ಹೂಡಿಕೆದಾರರು ನಿರಂತರವಾಗಿ ಹೆಚ್ಚಿನ ಹಣದುಬ್ಬರದಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ.
ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ (SGX ನಿಫ್ಟಿ) ನಿಫ್ಟಿ ಫ್ಯೂಚರ್ಸ್‌ನಲ್ಲಿನ ದೇಶೀಯ ಸೂಚ್ಯಂಕಗಳು ಶುಭಾರಂಭ ಮಾಡಿದೆ. ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 481 ಪಾಯಿಂಟ್‌ಗಳು ಅಥವಾ ಶೇಕಡಾ 0.91 ರಷ್ಟು ಜಿಗಿದು 53,411 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 147 ಪಾಯಿಂಟ್ ಅಥವಾ 0.93 ರಷ್ಟು ಏರಿಕೆಯಾಗಿ 15,955 ಕ್ಕೆ ವಹಿವಾಟು ನಡೆಸಿತು.
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 2.47 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 2.57 ರಷ್ಟು ಏರಿದ್ದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಉತ್ತಮವಾಗಿ ವಹಿವಾಟು ಆರಂಭ ಮಾಡಿದೆ. ಎಲ್ಲಾ 15 ಸೆಕ್ಟರ್ ಗೇಜ್‌ಗಳು ಪಾಸಿಟಿವ್ ವಹಿವಾಟು ಆರಂಭ ಮಾಡಿದೆ.

ನಿಫ್ಟಿ ಆಟೋ, ನಿಫ್ಟಿ ಎಫ್‌ಎಂಸಿಜಿ ಮತ್ತು ನಿಫ್ಟಿ ಫಾರ್ಮಾ ಅನುಕ್ರಮವಾಗಿ ಶೇ.2.53, ಶೇ.1.96 ಮತ್ತು ಶೇ.2.21ರಷ್ಟು ಏರಿಕೆಯಾಗಿದೆ. ಟಾಟಾ ಮೋಟಾರ್ಸ್ ಟಾಪ್ ಗೇನರ್ ಆಗಿದ್ದು, ಷೇರುಗಳು ಶೇಕಡಾ 7.88 ರಷ್ಟು ಏರಿಕೆಯಾಗಿದೆ. ರೂಪಾಯಿ 401.65 ಕ್ಕೆ ತಲುಪಿದೆ. ಸನ್ ಫಾರ್ಮಾ, ಯುಪಿಎಲ್, ಅಪೊಲೊ ಹಾಸ್ಪಿಟಲ್ಸ್ ಮತ್ತು ಟಾಟಾ ಸ್ಟೀಲ್ ಸಹ ಲಾಭ ಗಳಿಸಿದೆ.
ಬಿಎಸ್‌ಇಯಲ್ಲಿ 443 ಕುಸಿತ ಕಂಡರೆ 2,257 ಷೇರುಗಳು ಚೇತರಿಕೆ ಕಂಡಿದೆ. 30-ಷೇರು ಬಿಎಸ್‌ಇ ಸೂಚ್ಯಂಕದಲ್ಲಿ, ಸನ್ ಫಾರ್ಮಾ, ಟೈಟಾನ್, ಟಾಟಾ ಸ್ಟೀಲ್, ಡಾ ರೆಡ್ಡೀಸ್, ಎಂ & ಎಂ, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫಿನ್‌ಸರ್ವ್ ಟಾಪ್ ಗೇನರ್ ಷೇರುಗಳು ಆಗಿದೆ.
ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಟಿಸಿಎಸ್, ಎಚ್‌ಡಿಎಫ್‌ಸಿ ಟ್ವಿನ್‌ಗಳು (ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್), ಕೋಟಕ್ ಮಹೀಂದ್ರಾ ಬ್ಯಾಂಕ್, ವಿಪ್ರೋ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರು ಕುಸಿತ ಕಂಡಿದೆ. ಸೆನ್ಸೆಕ್ಸ್ ಗುರುವಾರ 1,158 ಪಾಯಿಂಟ್ ಅಥವಾ 0.51 ರಷ್ಟು ಕುಸಿದು 54,088 ಕ್ಕೆ ತಲುಪಿದ್ದರೆ, ನಿಫ್ಟಿ 359 ಪಾಯಿಂಟ್ ಅಥವಾ 2.22 ರಷ್ಟು ಕುಸಿದು 15,808 ಕ್ಕೆ ಸ್ಥಿರವಾಗಿದೆ.


Click it and Unblock the Notifications