ವಿಶ್ವದೆಲ್ಲೆಡೆ ಕೊರೊನಾವೈರಸ್ ಹರಡುವಿಕೆ ಮತ್ತಷ್ಟು ಹೆಚ್ಚಾಗಿದ್ದು ಜಾಗತಿಕ ಷೇರುಪೇಟೆ ಕುಸಿದಂತೆ, ಭಾರತದಲ್ಲೂ ಷೇರುಪೇಟೆ ಶೇಕ್ ಆಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಗುರುವಾರ (ಮಾರ್ಚ್ 19)ರಂದು ಕುಸಿತ ಮುಂದುವರಿದಿದೆ. ಸೆನ್ಸೆಕ್ಸ್ ಸೂಚ್ಯಂಕ 27,000 ತಲುಪಿದ್ದು, ನಿಫ್ಟಿ 37 ತಿಂಗಳ ಹಿಂದಕ್ಕೆ ತಲುಪಿದೆ.
ಷೇರು ಹೂಡಿಕೆದಾರರಲ್ಲಿ ಭೀತಿಯ ವಾತಾವರಣವಿದ್ದು, ಷೇರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಕಚ್ಛಾ ತೈಲ ದರದ ಕುಸಿತದ ನಡುವೆ ಕೊರೊನಾವೈರಸ್ ಪರಿಣಾಮ ಹೆಚ್ಚಾಗಿದೆ. ವಹಿವಾಟು ಆರಂಭವಾದಾಗ ಸೆನ್ಸೆಕ್ಸ್ 1,700ಕ್ಕೂ ಅಧಿಕ ಪಾಯಿಂಟ್ಸ್‌ಗಳು ಕುಸಿದು 29,002 ಅಂಶಗಳಿಗೂ ತಲುಪಿತ್ತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 340 ಅಂಶಗಳನ್ನು ಕಳೆದುಕೊಂಡು 8,100ರ ಅಂಶಗಳನ್ನು ಸಮೀಪಿಸಿದೆ.

ಗುರುವಾರವೂ ಬ್ಯಾಂಕ್‌ನ ಷೇರುಗಳು ಸೇರಿದಂತೆ ಬಹುತೇಕ ಎಲ್ಲಾ ಕಂಪನಿಯ ಷೇರುಗಳು ಭಾರೀ ನಷ್ಟ ಅನುಭವಿಸಿವೆ. ಕಳೆದ ಹಲವು ದಿನಗಳಲ್ಲಿ ಏರಿಕೆಯತ್ತ ಮುಖಮಾಡಿದ್ದ ಯೆಸ್ ಬ್ಯಾಂಕ್ ಷೇರುಗಳು ಕುಸಿತ ದಾಖಲಿಸಿದೆ. ಜೊತೆಗೆ ಜೀ ಎಂಟರ್‌ಟೈನ್‌ಮೆಂಟ್, ಭಾರ್ತಿ ಇನ್ಫಾಟ್ರೆಲ್, ಕೋಲ್ ಇಂಡಿಯಾ, ಮಾರುತಿ ಸುಜುಕಿ, ಒಎನ್‌ಜಿಸಿ ಷೇರುಗಳು ನಷ್ಟ ಅನುಭವಿಸಿವೆ.
ಇದರ ನಡುವೆ ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್ ಕಾರ್ಪ್, ಐಒಸಿ, ಐಟಿಸಿ ಷೇರುಗಳು ಏರಿಕೆ ಕಂಡಿವೆ.


Click it and Unblock the Notifications