ಭಾರತೀಯ ಷೇರುಪೇಟೆಯು ಶುಕ್ರವಾರ ಸಕಾರಾತ್ಮಕ ವಹಿವಾಟಿನಿಂದ ಆರಂಭಿಸಿ ಕೆಂಪು ಬಣ್ಣದಲ್ಲಿ ಕೊನೆಗೊಂಡಿದೆ. ಆಟೊಮೊಬೈಲ್, ಹಣಕಾಸಿನ ಸಂಬಂಧಿತ ಷೇರುಗಳ ಕುಸಿತದಿಂದಾಗಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 487 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15,000 ಗಡಿಯಲ್ಲಿದೆ.
ಇಂದಿನ ವಹಿವಾಟು ಅಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 487.43 ಪಾಯಿಂಟ್ ಅಥವಾ ಶೇಕಡಾ 0.95 ರಷ್ಟು ಕುಸಿದು 50,792.08 ಕ್ಕೆ ತಲುಪಿದ್ದರೆ, ನಿಫ್ಟಿ 143.80 ಪಾಯಿಂಟ್ ಅಥವಾ ಶೇಕಡಾ 0.95ರಷ್ಟು ಇಳಿಕೆಗೊಂಡು 15,031ಕ್ಕೆ ಇಳಿದಿದೆ. ಸುಮಾರು 1335 ಷೇರುಗಳು ಏರಿಕೆಗೊಂಡರೆ, 1626 ಷೇರುಗಳು ಕುಸಿದವು, ಮತ್ತು 174 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬಜಾಜ್ ಆಟೋ, ಹಿಂಡಾಲ್ಕೊ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಮಾರುತಿ ಸುಜುಕಿ ನಿಫ್ಟಿಯಲ್ಲಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಬಿಪಿಸಿಎಲ್, ಐಒಸಿ, ಪವರ್ ಗ್ರಿಡ್ ಕಾರ್ಪೊರೇಷನ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟೈಟಾನ್ ಕಂಪನಿ ಲಾಭಗಳಿಸಿವೆ.
ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ 0.4 ರಷ್ಟು ಕುಸಿದಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಸಮತಟ್ಟಾಗಿದೆ. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಮಾರಾಟದ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 13 ಪೈಸೆ ಇಳಿಕೆಗೊಂಡು 72.81 ಕ್ಕೆ ತಲುಪಿದೆ.


Click it and Unblock the Notifications