ಭಾರತದ ಷೇರುಪೇಟೆಯು ಮಂಗಳವಾರ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 2,476 ಪಾಯಿಂಟ್ಸ್ ಏರಿಕೆಯಾಗಿದ್ದು, ನಿಫ್ಟಿ 8,700ರ ಗಡಿದಾಟಿದೆ.
ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 708 ಪಾಯಿಂಟ್ಸ್ ಏರಿಕೆಗೊಂಡು 8,792.20 ಪಾಯಿಂಟ್ಸ್‌ಗಳನ್ನು ತಲುಪಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಭರ್ಜರಿಯಾಗಿ 2,476 ಪಾಯಿಂಟ್ಸ್ ಏರಿಕೆಗೊಂಡಿದ್ದು 30,067 ಪಾಯಿಂಟ್ಸ್‌ಗೆ ತಲುಪಿದೆ.

ಷೇರುಪೇಟೆಯಲ್ಲಿ ನವೋಲ್ಲಾಸ ಕಂಡುಬಂದಿದ್ದು, ದೇಶದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಬರುವ ವಿಶ್ವಾಸದಲ್ಲಿ ಹೂಡಿಕೆದಾರರು ಷೇರುಪೇಟೆ ವಹಿವಾಟಿಗೆ ಹೆಚ್ಚಿನ ಒಲವು ತೋರಿದ್ದಾರೆ. ಇಂದು ಬಹುತೇಕ ಎಲ್ಲಾ ಕಂಪನಿಯ ಷೇರುಗಳು ಏರಿಕೆ ದಾಖಲಿಸಿದ್ದು, ಬ್ಯಾಂಕಿಂಗ್ ಷೇರುಗಳು ಹೆಚ್ಚು ಲಾಭಗಳಿಸಿವೆ.
ಹೆಚ್ಚು ಲಾಭ ಗಳಿಸಿದ ಷೇರುಗಳು:
ಇಂಡಸ್‌ಲ್ಯಾಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಹಿಂಡಾಲ್ಕೊ, ಎಂ ಅಂಡ್ ಎಂ, ಗ್ರೇಸಿಯಂ, ಡಾ. ರೆಡ್ಡಿ ಲ್ಯಾಬ್ಸ್, ಮಾರುತಿ ಸುಜುಕಿ, ಹೆಚ್‌ಯುಎಲ್, ಜೀ ಎಂಟರ್‌ಟೈನ್‌ಮೆಂಟ್, ನೆಸ್ಲೆ, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಆಟೋ, ರಿಲಯನ್ಸ್ ಷೇರುಗಳು 10 ಪರ್ಸೆಂಟ್‌ಗೂ ಅಧಿಕ ಲಾಭಗಳಿಸಿವೆ.


Click it and Unblock the Notifications