For Quick Alerts
ALLOW NOTIFICATIONS  
For Daily Alerts

ಫೀನಿಕ್ಸ್‌ನಂತೆ ಎದ್ದ ಭಾರತದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 500 ಅಂಶಗಳ ಏರಿಕೆ

|

ಸೋಮವಾರ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ್ಲ ಕಲ್ಲೋಲವೇ ಸೃಷ್ಠಿಯಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಮಾರುಕಟ್ಟೆಯು ಉತ್ತಮ ಚೇತರಿಕೆ ಕಂಡಿದ್ದು ಹೂಡಿಕೆದಾರರು ಷೇರು ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ.

 

ಮಂಗಳವಾರ ಬೆಳಗ್ಗೆ ಮುಂಬೈ ಷೇರು ಮಾರುಕಟ್ಟೆ (ಬಿಎಸ್ಇ) 500 ಅಂಶಗಳ ಏರಿಕೆ ಕಂಡಿದೆ. ಈ ಮೂಲಕ ಹೂಡಿಕೆದಾರರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಮವಾರ ಇಳಿಕೆಯ ಹಾದಿ ಹಿಡಿದಿದ್ದ ಭಾರತದ ಷೇರು ಮಾರುಕಟ್ಟೆ ಮಂಗಳವಾರ ಭಾರೀ ಚೇತರಿಕೆ ಪಡೆದಿದೆ.

 
ಫೀನಿಕ್ಸ್‌ನಂತೆ ಎದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 500 ಅಂಶ ಏರಿಕೆ

ಸೆನ್ಸೆಕ್ಸ್ 41,204 ಅಂಶಗಳಿಗೆ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 12,150 ಅಂಶಗಳನ್ನು ಮುಟ್ಟಿದೆ. ಸೆನ್ಸೆಕ್ಸ್ನ 30 ಕಂಪನಿ ಷೇರು ಲಾಭಗಳಿಸಿದ್ದು, ಇಂಡಸ್‌ಲ್ಯಾಂಡ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನಾನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್ ಷೇರುಗಳು 1.5 ಪರ್ಸೆಂಟ್‌ನಿಂದ 2.5 ಪರ್ಸೆಂಟ್‌ವರೆಗೂ ಏರಿಕೆ ದಾಖಲಿಸಿವೆ.

ಫೀನಿಕ್ಸ್‌ನಂತೆ ಎದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 500 ಅಂಶ ಏರಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರವು ಬ್ಯಾರೆಲ್‌ 54 ಸೆಂಟ್ಸ್ ಇಳಿಕೆಯಾಗಿದ್ದು ಪ್ರತಿ ಬ್ಯಾರೆಲ್‌ಗೆ 68.37 ಅಮೆರಿಕನ್ ಡಾಲರ್‌ಗೆ ತಲುಪಿದೆ. ಸೋಮವಾರ ಕಚ್ಛಾ ತೈಲ ದರವು ಬ್ಯಾರೆಲ್‌ಗೆ 70.74 ಅಮೆರಿಕನ್ ಡಾಲರ್‌ಗೆ ತಲುಪಿತ್ತು. ಆದರೆ ಇದೀಗ ಮಧ್ಯಪ್ರಾಚ್ಯ ಸಂಘರ್ಷದ ಭೀತಿ ಸ್ವಲ್ಪ ಕಡಿಮೆಯಾಗಿದೆ.

ಚಿನ್ನ 10 ಗ್ರಾಮ್ ಗೆ 41,000, ಪೆಟ್ರೋಲ್ ಬ್ಯಾರೆಲ್ ಗೆ 70 ಡಾಲರ್, ಒಂದು ಡಾಲರ್ ಗೆ 72.04 ರುಪಾಯಿಚಿನ್ನ 10 ಗ್ರಾಮ್ ಗೆ 41,000, ಪೆಟ್ರೋಲ್ ಬ್ಯಾರೆಲ್ ಗೆ 70 ಡಾಲರ್, ಒಂದು ಡಾಲರ್ ಗೆ 72.04 ರುಪಾಯಿ

ಅಮೆರಿಕಾ ಮತ್ತು ಇರಾನ್ ನಡುವೆ ಯುದ್ಧ ಭೀತಿ ಭುಗಿಲೆದ್ದಿದ್ದರಿಂದ ಕಳೆದ ಮೂರು ದಿನ ಷೇರು ಮಾರುಕಟ್ಟೆಯು ತೀವ್ರ ಕುಸಿತ ಕಂಡಿತ್ತು. ಕಚ್ಛಾ ತೈಲ ಬೆಲೆ ಏರಿಕೆಯು ಇದಕ್ಕೆ ಪ್ರಮುಖ ಕಾರಣವಾಗಿತ್ತು.

English summary

Sensex Surges 500 Points, Nifty Near 12,150

Indian markets rebounded today, Sensex rose over 500 points to 41,204 while Nifty regained 12,150
Story first published: Tuesday, January 7, 2020, 10:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X