ಷೇರು ಮಾರುಕಟ್ಟೆ ಸೂಚ್ಯಂಕಗಳು ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಬೆಳಗಿನ ವಹಿವಾಟಿನಲ್ಲಿ ಶೇಕಡಾ ಒಂದಕ್ಕಿಂತ ಕೆಳಕ್ಕೆ ಕುಸಿತ ಕಂಡಿದೆ. ನಿರಂತರವಾಗಿ ಷೇರು ಮಾರುಕಟ್ಟೆಯು ತಲ್ಲಣಿಸುತ್ತಿದೆ. ಇದರಿಂದಾಗಿ ಹೂಡಿಕೆದಾರರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಕುಸಿತ ಕಂಡಿದೆ. ನಿಫ್ಟಿ ಶೇಕಡ 1.81 ಅಥವಾ 293.40 ಅಂಕಗಳು ಕೆಳಕ್ಕೆ ಇಳಿದಿದ್ದು, 16,167.10ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎಸ್ ಆಂಡ್ ಪಿ ಬಿಎಸ್‌ಇ ಸೆನ್ಸೆಕ್ಸ ಶೇಕಡ 1.80 ಅಥವಾ 971.42 ಅಂಕಗಳು ಕುಸಿದು, 53,116.97 ಕ್ಕೆ ತಲುಪಿದೆ.
ನಿಫ್ಟಿಯ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸೂಚ್ಯಂಕವು ಶೇಕಡಾ 3.2 ರಷ್ಟು ಕುಸಿದಿದೆ. ಇನ್ನು ನಿಫ್ಟಿಯ ಮೆಟಲ್, ಫೈನಾನ್ಸ್ ಮತ್ತು ಆಟೋ ಸೂಚ್ಯಂಕಗಳು ಸುಮಾರು 2 ಪ್ರತಿಶತದಷ್ಟು ಕುಸಿದವು.

ಬುಧವಾರದಂದು ಷೇರು ಮಾರುಕಟ್ಟೆಗಳು ಎರಡು ತಿಂಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿತ ಕಂಡಿದೆ. ಇದಾದ ಬಳಿಕೆ ಸತತ ನಾಲ್ಕನೇ ದಿನ ಷೇರು ಮಾರುಕಟ್ಟೆ ತಲ್ಲಣಿಸಿದೆ. ಸೂಚ್ಯಂಕಗಳು ಶೇಕಡಾ 1.5 ರಷ್ಟು ಕುಸಿದಿದೆ. ಇದು ಕಳೆದ ಮಾರ್ಚ್ 9ರ ಬಳಿಕ ಮೊದಲ ಬಾರಿಗೆ ಇಷ್ಟು ಕೆಳಕ್ಕೆ ಇಳಿದಿದೆ.
ಈ ನಡುವೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಗುರುವಾರ ಕೊಂಚ ಕುಸಿತ ಕಂಡಿದೆ. ಶೇಕಡಾ 1 ಕ್ಕಿಂತ ಹೆಚ್ಚು ಕುಸಿದವು. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್‌ಗೆ ಶೇಕಡ 1.25 ಅಥವಾ 1.2 ಶೇಕಡಾ ಕುಸಿದು 106.26 ಡಾಲರ್ ಆಗಿದೆ.
ಬಜಾಜ್ ಫೈನಾನ್ಸ್ ಸ್ಟಾಕ್ ಭಾರೀ ಕುಸಿತ ಕಂಡಿದೆ. ಸ್ಟಾಕ್ 3.25 ಶೇಕಡಾ ಕುಸಿದು, 5,618.50 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ ಲೈಫ್ ಮತ್ತು ಟಾಟಾ ಮೋಟಾರ್ಸ್ ಕೂಡ ನಷ್ಟ ಅನುಭವಿಸಿದೆ.
30 ಷೇರು ಬಿಎಸ್‌ಇ ಸೂಚ್ಯಂಕದಲ್ಲಿ, ಬಜಾಜ್ ಫೈನಾನ್ಸ್, ಎಂ & ಎಂ, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫಿನ್‌ಸರ್ವ್, ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಡಾ ರೆಡ್ಡೀಸ್, ಎಲ್ & ಟಿ ಮತ್ತು ಹಿಂದೂಸ್ತಾನ್ ಯೂನಿಲಿವರ್ ಹಿಂದುಳಿದಿದೆ.


Click it and Unblock the Notifications