For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಟಾಪ್-10: 79,798.3 ಕೋಟಿ ರೂ ಮೌಲ್ಯ ಹೆಚ್ಚಳ; ಧರ್ಮರಾಜ್ ಕ್ರಾಪ್ ಗಾರ್ಡ್‌ನ ಐಪಿಒ

|

ಮುಂಬೈ: ಷೇರುಪೇಟೆಯಲ್ಲಿ ಕಳೆದ ವಾರ (ನವೆಂಬರ್ 21ರಿಂದ 26ರವರೆಗೆ) ಸೆನ್ಸೆಕ್ಸ್ ಹೊಸ ದಾಖಲೆ ಬರೆಯಿತು. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ ಕಳೆದ ವಾರಾಂತ್ಯದಲ್ಲಿ 62,293.64 ಅಂಕಗಳ ಮಟ್ಟಕ್ಕೆ ಹೋಗಿ ಮುಟ್ಟಿತ್ತು. ಇದು ಈ ಸೂಚ್ಯಂಕದ ಹೊಸ ದಾಖಲೆ ಎನಿಸಿದೆ.

ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿರುವ ಅತಿಹೆಚ್ಚು ಮೌಲ್ಯದ ಅಗ್ರ 10 ಕಂಪನಿಗಳ ಪೈಕಿ ಅದಾನಿ ಎಂಟರ್‌ಪ್ರೈಸಸ್ ಹೊರತುಪಡಿಸಿ ಉಳಿದ 9 ಸಂಸ್ಥೆಗಳ ಷೇರುಗಳು ಏರಿಕೆ ಕಂಡಿವೆ. ರಿಲಾಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿ ಮೊದಲಾದ ಸಂಸ್ಥೆಗಳ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡವು. ಅದರಲ್ಲೂ ಐಟಿ ಕಂಪನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳಿಗೆ ಒಳ್ಳೆಯ ಬೇಡಿಕೆ ಇದ್ದಂತಿತ್ತು.

ಸೆನ್ಸೆಕ್ಸ್‌ನ ಟಾಪ್-10 ಕಂಪನಿಗಳಿಂದ ಕಳೆದ ವಾರ ಒಟ್ಟಾರೆ ಷೇರುಪೇಟೆಗೆ ಹೆಚ್ಚಾಗಿರುವ ಮೌಲ್ಯ 79,798.3 ಕೋಟಿ ರೂ ಆಗಿದೆ. ಈ 10 ಕಂಪನಿಗಳ ಪೈಕಿ ಯಾವ್ಯಾವುವು ಎಷ್ಟೆಷ್ಟು ಮೌಲ್ಯದಷ್ಟು ಬೆಳವಣಿಗೆ ಸಾಧಿಸಿವೆ ಎಂಬ ವಿವರ ಇಲ್ಲಿದೆ.

ಸೆನ್ಸೆಕ್ಸ್ ಟಾಪ್-10: 79,798.3 ಕೋಟಿ ರೂ ಮೌಲ್ಯ ಹೆಚ್ಚಳ

ನವೆಂಬರ್ 21-26ರವರೆಗೆ ಅತಿಹೆಚ್ಚು ಪ್ರಗತಿ ಕಂಡ ಷೇರುಗಳು
ಟಿಸಿಎಸ್: 17,215.83 ಕೋಟಿ ರೂ ಹೆಚ್ಚಳ
ಇನ್ಫೋಸಿಸ್: 15,946.6 ಕೋಟಿ ರೂ ಹೆಚ್ಚಳ
ರಿಲಾಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್): 13,192.48 ಕೋಟಿ ರೂ ಹೆಚ್ಚಳ
ಹಿಂದೂಸ್ತಾನ್ ಯೂನಿಲಿವರ್: 12,535.07 ಕೋಟಿ ರೂ ಹೆಚ್ಚಳ
ಐಸಿಐಸಿಐ ಬ್ಯಾಂಕ್: 6,463.34 ಕೋಟಿ ರೂ ಹೆಚ್ಚಳ
ಭಾರ್ತಿ ಏರ್‌ಟೆಲ್: 5,451.97 ಕೋಟಿ ರೂ ಹೆಚ್ಚಳ
ಎಸ್‌ಬಿಐ: 4,283.81 ಕೋಟಿ ರೂ ಹೆಚ್ಚಳ
ಎಚ್‌ಡಿಎಫ್‌ಸಿ: 2,674.47 ಕೋಟಿ ರೂ ಹೆಚ್ಚಳ
ಎಚ್‌ಡಿಎಫ್‌ಸಿ ಬ್ಯಾಂಕ್: 2,034.73 ಕೋಟಿ ರೂ ಹೆಚ್ಚಳ
ಅದಾನಿ ಎಂಟರ್‌ಪ್ರೈಸಸ್: 13,281.01 ಕೋಟಿ ರೂ ಇಳಿಕೆ

ಸೆನ್ಸೆಕ್ಸ್‌ನ ಟಾಪ್-10 ಕಂಪನಿಗಳ ಒಟ್ಟಾರೆ ಷೇರು ಮೌಲ್ಯ
ರಿಲಾಯನ್ಸ್ ಇಂಡಸ್ಟ್ರೀಸ್: 17,70,532.20 ಕೋಟಿ ರೂ
ಟಿಸಿಎಸ್: 12,39,997.62
ಎಚ್‌ಡಿಎಫ್‌ಸಿ ಬ್ಯಾಂಕ್: 9,01,523.93
ಇನ್ಫೋಸಿಸ್: 6,86,211.59
ಐಸಿಐಸಿಐ ಬ್ಯಾಂಕ್: 6,48,362.25
ಹಿಂದೂಸ್ಥಾನ್ ಯೂನಿಲಿವರ್: 5,95,997.32
ಎಸ್‌ಬಿಐ: 5,42,125.54
ಎಚ್‌ಡಿಎಫ್‌ಸಿ: 4,87,908.63
ಭಾರ್ತಿ ಏರ್‌ಟೆಲ್: 4,71,094.46
ಅದಾನಿ ಎಂಟರ್‌ಪ್ರೈಸಸ್: 4,44,982.34

ಸೆನ್ಸೆಕ್ಸ್ ಟಾಪ್-10: 79,798.3 ಕೋಟಿ ರೂ ಮೌಲ್ಯ ಹೆಚ್ಚಳ

ಸೋಮವಾರ ಷೇರುಪೇಟೆ ಮಂದ
ಹಾಂಕಾಂಗ್, ಚೀನಾ, ಜಪಾನ್, ಸೌತ್ ಕೊರಿಯಾ ಮೊದಲಾದ ಏಷ್ಯನ್ ಷೇರುಪೇಟೆಗಳು ಇಂದು ಆರಂಭಿಕ ವಹಿವಾಟಿನಲ್ಲಿ ನೀರಸತೆ ಕಂಡಿವೆ. ಜಾಗತಿಕವಾಗಿಯೂ ಪರಿಸ್ಥಿತಿ ನೀರಸವಾಗಿದೆ. ಭಾರತದ ಷೇರುಪೇಟೆಯಲ್ಲೂ ನಿರುತ್ಸಾಹ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಸಿಂಗಾಪುರ್ ಎಕ್ಸ್‌ಚೇಂಜ್‌ನಲ್ಲಿ ನಿಫ್ಟಿ ಫ್ಯೂಚರ್ಸ್ ಶೇ. 0.27ರಷ್ಟು ಕಡಿಮೆಗೆ ವಹಿವಾಟು ಕಾಣುತ್ತಿದ್ದುದು ಭಾರತೀಯ ಷೇರುಪೇಟೆಗೆ ಈ ವಾರದ ಆರಂಭ ದಿನ ಅಷ್ಟೇನೂ ಶುಭವಿದ್ದಂತೆ ಕಾಣುತ್ತಿಲ್ಲ.

ಪೇಟಿಎಂ, ಅದಾನಿ ಗ್ರೂಪ್, ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಹೀರೋ ಮೋಟೋಕಾರ್ಪ್, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಗಳ ಷೇರುಗಳ ಮೇಲೆ ಇವತ್ತು ಹೆಚ್ಚು ಕುತೂಹಲದ ಕಣ್ಣುಗಳಿವೆ.

ಧರ್ಮರಾಜ್ ಐಪಿಒ
ಇವತ್ತು ಧರ್ಮರಾಜ್ ಕ್ರಾಪ್ ಗಾರ್ಡ್‌ ಸಂಸ್ಥೆ ಐಪಿಒಗೆ ತೆರೆದುಕೊಳ್ಳುತ್ತಿದೆ. ನವೆಂಬರ್ 30ರವರೆಗೂ ಆರಂಭಿಕ ಸಾರ್ವಜನಿಕ ಕೊಡುಗೆ ಲಭ್ಯ ಇರುತ್ತದೆ. ಸಾಂಸ್ಥಿಕ ಹೂಡಿಕೆದಾರರಿಗೆ ಈಗಾಗಲೇ ಪ್ರತೀ ಷೇರಿಗೆ 237 ರೂನಂತೆ 31.62 ಲಕ್ಷ ಈಕ್ವಿಟಿ ಷೇರುಗಳನ್ನು ಹಂಚಲಾಗಿದೆ. ಐಪಿಒನಲ್ಲಿ 213 ರೂ ಬೆಲೆ ನಿಗದಿ ಮಾಡಿ ಮಾರಕ್ಕಿಡಲಾಗಿದೆ. 216 ಕೋಟಿ ರೂ ಮೊತ್ತದಷ್ಟು ಹೊಸ ಷೇರುಗಳು ಆಫರ್‌ನಲ್ಲಿವೆ. ಜೊತೆಗೆ ಪ್ರೊಮೋಟರ್ ಕಂಪನಿಗಳು ತಮ್ಮ ಪಾಲಿನ 14.83 ಲಕ್ಷ ಷೇರುಗಳನ್ನೂ ಸಾರ್ವಜನಿಕರಿಗೆ ಖರೀದಿಗೆ ಇಟ್ಟಿದ್ದಾರೆ.

English summary

Sensex Top-10 Firms Add Almost Rs 80000 Crore Last Week; Dharmaraj Crop Guard IPO From Nov 28th

IT companies Tata telecommunicatons Services and Infosys made big gains in last week, as top-10 firms of sensex, except Adani enterprises, have added 79,798.3 crore to the market.
Story first published: Monday, November 28, 2022, 9:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X