ಭಾರತೀಯ ಷೇರುಪೇಟೆಯು ಸೋಮವಾರ ಕುಸಿತದೊಂದಿಗೆ ವಹಿವಾಟು ಶುರುಮಾಡಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 10.20ರ ಸುಮಾರಿಗೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 133.11 ಪಾಯಿಂಟ್‌ಗಳಷ್ಟು ಕುಸಿದು ವಹಿವಾಟು ತೆರೆಯಿತು. ಆದರೆ ನಂತರದಲ್ಲಿ ಶೇಕಡಾ 1ರಷ್ಟು ಅಥವಾ 500ಕ್ಕೂ ಅಧಿಕ ಪಾಯಿಂಟ್ಸ್ ಇಳಿಕೆಗೊಂಡಿತು. ನಿಫ್ಟಿ 29.30 ಪಾಯಿಂಟ್‌ಗಳ ಕುಸಿತ ಕಂಡು ವಹಿವಾಟು ಆರಂಭಿಸಿ, 130ಕ್ಕೂ ಅಧಿಕ ಪಾಯಿಂಟ್ಸ್ ಇಳಿಕೆಯೊಂದಿಗೆ 15 ಸಾವಿರ ಗಡಿಯಿಂದ ಕೆಳಗಿಳಿದಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 800 ಪಾಯಿಂಟ್ಸ್ ಇಳಿಕೆಗೊಂಡಿದ್ದು, ನಿಫ್ಟಿ ಶೇಕಡಾ 1.5ರಷ್ಟು ಇಳಿಕೆ ಸಾಧಿಸಿದೆ.
ಒಎನ್‌ಜಿಸಿ ಷೇರುಗಳು ಸುಮಾರು 1 ರೂ.ಗಳ ಏರಿಕೆ ಕಂಡು 116.30 ರೂ., ಏಷ್ಯನ್ ಪೇಂಟ್ಸ್ ಷೇರು 24 ರೂ. ಏರಿಕೆಯಾಗಿ 2,425.45 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 2 ರೂ ಗಳಿಸಿ 222.40 ರೂ., ಐಒಸಿ ಷೇರುಗಳು ಸುಮಾರು 1 ರೂ.ಗಳ ಏರಿಕೆ ಕಂಡು 102.20 ರೂ., ಲಾರ್ಸೆನ್ ಷೇರು ಸುಮಾರು 8 ರೂ ಗಳಿಸಿ 1,522.25 ರೂ. ತಲುಪಿದೆ.


Click it and Unblock the Notifications