ಜಾಗತಿಕ ಆರ್ಥಿಕ ವ್ಯವಸ್ಥೆಯು ಕುಸಿಯುತ್ತಿರುವ ಭೀತಿಯ ಜೊತೆಗೆ ಭಾರತದ ಷೇರುಪೇಟೆಯಲ್ಲಿ ಕುಸಿದ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬುಧವಾರ 1,203.18 ಪಾಯಿಂಟ್ಸ್ ಇಳಿಕೆಗೊಂಡಿದೆ. ನಿಫ್ಟಿ ಕೂಡ 4 ಪರ್ಸೆಂಟ್ ಇಳಿಕೆಯಾಗಿದೆ.
ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 343.95 ಪಾಯಿಂಟ್ಸ್‌ಗಳು ಇಳಿಕೆಗೊಂಡು 8,253.80 ಪಾಯಿಂಟ್ಸ್‌ಗೆ ಮುಟ್ಟಿದೆ. ಸೆನ್ಸೆಕ್ಸ್ ಕೂಡ 4.08 ಪರ್ಸೆಂಟ್ ಕುಸಿದು 1203 ಪಾಯಿಂಟ್ಸ್ ಕುಸಿದಿದೆ. ಈ ಮೂಲಕ ಹೂಡಿಕೆದಾರರ ಲಕ್ಷಾಂತರ ಕೋಟಿ ರುಪಾಯಿ ಮಾಯವಾಗಿದೆ. ಜಗತ್ತಿನೆಲ್ಲೆಡೆ ಕೊರೊನಾವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಹೂಡಿಕೆದಾರರು ತರಾತುರಿಯಲ್ಲಿ ಮಾರುಕಟ್ಟೆಯಿಂದ ಕಾಲ್ತೆಗೆಯುತ್ತಿದ್ದಾರೆ.

ಹಣಕಾಸು ವರ್ಷದ ಕೊನೆಯ ದಿನ ಮಂಗಳವಾರ (ಮಾರ್ಚ್ 31) ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆ ದಾಖಲಿಸಿದ್ದವು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) 3.82 ಪರ್ಸೆಂಟ್ ಏರಿಕೆಗೊಂಡು 8,597.75 ಪಾಯಿಂಟ್ಸ್‌ಗೆ ತಲುಪಿತ್ತು. ಸೆನ್ಸೆಕ್ಸ್ 3.62 ಪರ್ಸೆಂಟ್ ಏರಿಕೆಯಾಗಿ 29,468.49 ಅಂಶಗಳನ್ನು ತಲುಪಿತ್ತು. ಆದರೆ ಬುಧವಾರ ವಹಿವಾಟು ಆರಂಭದಿಂದ ಮುಕ್ತಾಯದವರೆಗೂ ಇಳಿಕೆ ದಾಖಲಿಸಿದೆ.
ನಷ್ಟ ಅನುಭವಿಸಿದ ಷೇರುಗಳು:
ಟೆಕ್ ಮಹೀಂದ್ರಾ, ಕೋಟಕ್ ಮಹೀಂದ್ರಾ, ಟಿಸಿಎಸ್, ಯುಪಿಎಲ್, ಇನ್ಫೋಸಿಸ್, ಆ್ಯಕ್ಸಿಸ್ ಬ್ಯಾಂಕ್, ಹೆಚ್‌ಸಿಎಲ್ ಟೆಕ್, ಎಸ್‌ಬಿಐ, ಹೆಚ್‌ಯುಎಲ್ ಕಂಪನಿಯ ಷೇರುಗಳು 5 ಪರ್ಸೆಂಟ್‌ಗೂ ಅಧಿಕ ನಷ್ಟ ಅನುಭವಿಸಿವೆ.
ಲಾಭ ಗಳಿಸಿದ ಷೇರುಗಳು:
ಹೀರೊ ಮೊಟೊಕಾರ್ಪ್, ಬಜಾಜ್ ಆಟೋ, ಟೈಟಾನ್ ಕಂಪನಿ, ಬಜಾಜ್ ಫೈನಾನ್ಸ್, ಗ್ರೇಸಿಎಂ


Click it and Unblock the Notifications