ಭಾರತೀಯ ಷೇರುಪೇಟೆ ಸೋಮವಾರ ಸಕಾರಾತ್ಮಕ ವಹಿವಾಟು ಬಳಿಕ ಹಸಿರು ಬಣ್ಣದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 111 ಪಾಯಿಂಟ್ಸ್ ಏರಿಕೆಗೊಂಡರೆ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15200ರ ಗಡಿ ಸಮೀಪಿಸಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.22ರಷ್ಟು ಅಥವಾ 111.42 ಪಾಯಿಂಟ್ಸ್ ಹೆಚ್ಚಳಗೊಂಡು 50,651.90 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.15ರಷ್ಟು ಅಥವಾ 22.40 ಪಾಯಿಂಟ್ಸ್ ಏರಿಕೆಗೊಂಡು 15,197.70 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಅಂತ್ಯಕ್ಕೆ ಇಂದು ಸುಮಾರು 1930 ಷೇರುಗಳು ಏರಿಕೆಗೊಂಡರೆ, 1218 ಷೇರುಗಳು ಕುಸಿದಿವೆ ಮತ್ತು 161 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಐಒಸಿ, ಬಿಪಿಸಿಎಲ್, ಎಸ್‌ಬಿಐ, ಲಾರ್ಸೆನ್ ಮತ್ತು ಟೌಬ್ರೊ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಶ್ರೀ ಸಿಮೆಂಟ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಇಳಿಕೆಗೊಂಡಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟಿನ ಮಧ್ಯೆ ಭಾರತೀಯ ರೂಪಾಯಿ 13 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್‌ಗೆ 72.96 ಕ್ಕೆ ತಲುಪಿದೆ.


Click it and Unblock the Notifications