ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯ ಜೊತೆಗೆ ಭಾರತದ ಅನೇಕ ರಾಜ್ಯಗಳಲ್ಲಿ ಕೋವಿಡ್-19 ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಷೇರುಪೇಟೆಯು ಹಸಿರು ಬಣ್ಣದಲ್ಲಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 130 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 40 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 130 ಪಾಯಿಂಟ್ಸ್ ಅಥವಾ ಶೇಕಡಾ 0.25ರಷ್ಟು ಹೆಚ್ಚಳಗೊಂಡು 53055.71 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 39.20 ಪಾಯಿಂಟ್ಸ್ ಅಥವಾ ಶೇಕಡಾ 0.25ರಷ್ಟು ಏರಿಕೆಗೊಂಡು 15899.60 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಆರಂಭದಲ್ಲಿ 1611 ಷೇರುಗಳು ಏರಿಕೆಗೊಂಡರೆ, 569 ಷೇರುಗಳು ಕುಸಿದವು ಮತ್ತು 83 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಒಎನ್‌ಜಿಸಿಯ ಷೇರುಗಳು ಸುಮಾರು 2 ರೂ.ಗಳ ಲಾಭದೊಂದಿಗೆ 123.20 ರೂ., ರಿಲಯನ್ಸ್ ಷೇರುಗಳು 16 ರೂ.ಗಳ ಲಾಭದೊಂದಿಗೆ 2,120.15 ರೂಗಳಲ್ಲಿ ಪ್ರಾರಂಭವಾಯಿತು. ಎಸ್‌ಬಿಐ ಷೇರು ಸುಮಾರು 3 ರೂ.ಗಳ ಲಾಭದೊಂದಿಗೆ 431.55 ರೂ., ಇಂಡಸ್ಇಂಡ್ ಬ್ಯಾಂಕಿನ ಷೇರು ಸುಮಾರು 6 ರೂ.ಗಳ ಲಾಭದೊಂದಿಗೆ 1,019.05 ರೂ., ಅದಾನಿ ಪೊರ್ಟ್ಸ್ ಷೇರುಗಳು 24 ರೂ.ಗಳ ಏರಿಕೆ ಕಂಡು 3,027.45 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ಸುಮಾರು 7 ರೂ.ಗಳಷ್ಟು ಇಳಿಕೆಯಾಗಿ 718.85 ರೂ., ಟಿಸಿಎಸ್‌ನ ಷೇರುಗಳು ಸುಮಾರು 25 ರೂ.ಗಳಷ್ಟು ಇಳಿಕೆಯಾಗಿ 3,355.45 ರೂ., ಬಜಾಜ್ ಆಟೋ ಷೇರುಗಳು ಸುಮಾರು 28 ರೂ.ಗಳಷ್ಟು ಇಳಿಕೆಯಾಗಿ 4,167.85 ರೂ., ಇನ್ಫೋಸಿಸ್ ಷೇರುಗಳು 9 ರೂ.ಗಳಷ್ಟು ಇಳಿಕೆಯಾಗಿ 1,564.90 ರೂ., ವಿಪ್ರೋ ಷೇರು ಸುಮಾರು 2 ರೂ. ಕುಸಿದು 545.50 ರೂ. ತಲುಪಿದೆ.


Click it and Unblock the Notifications