For Quick Alerts
ALLOW NOTIFICATIONS  
For Daily Alerts

ಕುಸಿದಿದ್ದ ಸೆನ್ಸೆಕ್ಸ್ 160 ಪಾಯಿಂಟ್ಸ್ ಏರಿಕೆ: ನಿಫ್ಟಿ ಕೂಡ ಹೆಚ್ಚಳ

|

ಭಾರತೀಯ ಷೇರುಪೇಟೆ ಗುರುವಾರ ಸಕಾರಾತ್ಮಕ ಜಾಗತಿಕ ಸೂಚನೆಗಳ ಹಿನ್ನೆಲೆಯಲ್ಲಿ ಉತ್ತಮ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 165 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 50 ಪಾಯಿಂಟ್ಸ್‌ ಹೆಚ್ಚಾಗಿದೆ.

ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!

ಬೆಳಿಗ್ಗೆ 9.17ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 160 ಪಾಯಿಂಟ್ಸ್‌ ಅಥವಾ ಶೇಕಡಾ 0.31ರಷ್ಟು ಏರಿಕೆಗೊಂಡು 52102.51 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.80 ಪಾಯಿಂಟ್ಸ್‌ ಅಥವಾ ಶೇಕಡಾ 0.32ರಷ್ಟು ಹೆಚ್ಚಾಗಿ 15689.20 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟು ಆರಂಭಗೊಂಡಾಗ 1559 ಷೇರುಗಳು ಏರಿಕೆಗೊಂಡರೆ, 266 ಷೇರುಗಳು ಕುಸಿದವು ಮತ್ತು 52 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕುಸಿದಿದ್ದ ಸೆನ್ಸೆಕ್ಸ್ 160 ಪಾಯಿಂಟ್ಸ್ ಏರಿಕೆ: ನಿಫ್ಟಿ ಕೂಡ ಹೆಚ್ಚಳ

ಏರಿಕೆಗೊಂಡ ಷೇರುಗಳು:
ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 10 ರೂ.ಗಳ ಏರಿಕೆ ಕಂಡು 707.35 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 3 ರೂ.ಗಳ ಏರಿಕೆ ಕಂಡು 245.50 ರೂ., ಟೆಕ್ ಮಹೀಂದ್ರಾ ಷೇರುಗಳು ಸುಮಾರು 15 ರೂ.ಗಳ ಲಾಭದೊಂದಿಗೆ 1,067.00 ರೂ., ವಿಪ್ರೊ ಷೇರು ಸುಮಾರು 7 ರೂ.ಗಳ ಲಾಭದೊಂದಿಗೆ 551.10 ರೂ., ಶ್ರೀ ಸಿಮೆಂಟ್‌ನ ಷೇರು 337 ರೂ.ಗಳ ಏರಿಕೆ ಕಂಡು 28,743.95 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಐಟಿಸಿಯ ಷೇರು ಸುಮಾರು 4 ರೂಪಾಯಿ ಇಳಿಕೆಗೊಂಡು 208.10 ರೂ.ಗೆ ಪ್ರಾರಂಭವಾಯಿತು. ಒಎನ್‌ಜಿಸಿಯ ಷೇರು ಸುಮಾರು 1 ರೂ.ಗೆ ಇಳಿದು 122.70 ರೂ., ಐಸಿಐಸಿಐ ಬ್ಯಾಂಕಿನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 632.80 ರೂ., ಬ್ರಿಟಾನಿಯದ ಷೇರು ಸುಮಾರು 15 ರೂ. ಕುಸಿದು 3,560.00 ರೂ.ಗೆ ಪ್ರಾರಂಭವಾಯಿತು, ಏಷ್ಯನ್ ಪೇಂಟ್ಸ್‌ನ ಷೇರುಗಳು 11 ರೂ.ಗಳಷ್ಟು ಇಳಿಕೆಯಾಗಿ 2,933.05 ರೂ. ಮುಟ್ಟಿದೆ.

English summary

Sensex Up 160 Points: Nifty Around 15700

Sensex was up 160.87 points or 0.31% at 52102.51, and the Nifty was up 50.80 points or 0.32% at 15686.20.
Story first published: Thursday, June 10, 2021, 9:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X