ಸೆನ್ಸೆಕ್ಸ್ 170 ಪಾಯಿಂಟ್ಸ್‌ ಏರಿಕೆ: ನಿಫ್ಟಿ 48 ಪಾಯಿಂಟ್ಸ್‌ ಹೆಚ್ಚಳ

ಭಾರತೀಯ ಷೇರುಪೇಟೆ ಇಂದು ಸಕಾರಾತ್ಮಕ ಆರಂಭವನ್ನು ಪಡೆದಿದೆ. ಸೋಮವಾರ 2020-21ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ. 7.3ರಷ್ಟು ಸಂಕುಚಿತಗೊಂಡ ಬಳಿಕ ಇಂದು ಮಿಶ್ರ ವಹಿವಾಟು ನಿರೀಕ್ಷಿಸಲಾಗಿದೆ.

ಬಿಎಸ್‌ಇ ಸೆನ್ಸೆಕ್ಸ್ ಸುಮಾರು 172.76 ಪಾಯಿಂಟ್‌ಗಳ ಏರಿಕೆ ಕಂಡು 52110.20 ಪಾಯಿಂಟ್‌ಗಳ ಮಟ್ಟದಲ್ಲಿ ತೆರೆಯಿತು. ಅದೇ ಸಮಯದಲ್ಲಿ, ಎನ್ಎಸ್ಇ ನಿಫ್ಟಿ 48.50 ಪಾಯಿಂಟ್ ಗಳಿಕೆಯೊಂದಿಗೆ 15631.30ಕ್ಕೆ ಪ್ರಾರಂಭವಾಯಿತು.

ಸೆನ್ಸೆಕ್ಸ್ 170 ಪಾಯಿಂಟ್ಸ್‌ ಏರಿಕೆ: ನಿಫ್ಟಿ 48 ಪಾಯಿಂಟ್ಸ್‌ ಹೆಚ್ಚಳ

ದಿನದ ವಹಿವಾಟು ಆರಂಭಗೊಂಡಾಗ ಇಂದು ಬಿಎಸ್‌ಇಯಲ್ಲಿ ಒಟ್ಟು 2,188 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಈ ಪೈಕಿ ಸುಮಾರು 1,535 ಷೇರುಗಳು ಏರಿಕೆಗೊಂಡರೆ 578 ಕುಸಿತದೊಂದಿಗೆ ತೆರೆದಿವೆ. ಅದೇ ಸಮಯದಲ್ಲಿ, 75 ಕಂಪನಿಗಳ ಷೇರು ಬೆಲೆ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಬಜಾಜ್ ಆಟೋ ಷೇರು ಸುಮಾರು 128 ರೂ ಗಳಿಸಿ 4,321.10 ರೂ., ಟಾಟಾ ಮೋಟಾರ್ಸ್‌ನ ಷೇರು ಸುಮಾರು 6 ರೂ.ಗಳ ಲಾಭದೊಂದಿಗೆ 324.30 ರೂ., ಎಚ್‌ಡಿಎಫ್‌ಸಿ ಷೇರುಗಳು 36 ರೂ.ಗಳ ಏರಿಕೆ ಕಂಡು 2,588.90 ರೂ., ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 114.85 ರೂ., ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು 13 ರೂ.ಗಳ ಏರಿಕೆ ಕಂಡು 1,026.00 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಟಾಟಾ ಸ್ಟೀಲ್ ಷೇರು 15 ರೂ. ಇಳಿಕೆಗೊಂಡು 1,110.60 ರೂ.ಗೆ ಪ್ರಾರಂಭವಾಯಿತು, ಅಲ್ಟ್ರಾಟೆಕ್ ಸಿಮೆಂಟ್‌ 64 ರೂ. ಇಳಿಕೆಗೊಂಡು 6,643.75 ರೂ.ಗೆ ಪ್ರಾರಂಭವಾಗಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 8 ರೂ.ಗಳ ಕುಸಿತ ಕಂಡು 702.70 ರೂ., ಏಷ್ಯನ್ ಪೇಂಟ್ಸ್‌ನ ಷೇರುಗಳು 19 ರೂ. ಕುಸಿದು 2,959.00, ಗ್ರಾಸಿಮ್‌ನ ಷೇರು ಸುಮಾರು 6 ರೂ.ಗಳನ್ನು ಕಳೆದುಕೊಂಡು 1,464.85 ರೂ. ಮುಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+