For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್‌ 174 ಪಾಯಿಂಟ್ಸ್ ಏರಿಕೆ, ನಿಫ್ಟಿ 61 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆಯು ಶುಕ್ರವಾರ (ಜೂನ್ 11) ಭರ್ಜರಿ ವಹಿವಾಟು ಕಂಡಿದ್ದು ದಾಖಲೆಯ ಮಟ್ಟವನ್ನ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 174 ಪಾಯಿಂಟ್ಸ್ ಏರಿಕೆಯಾಗಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 61 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!ಒಂದು ವರ್ಷದ ಹಿಂದೆ ಈ ಷೇರಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ರೆ, ಈಗ 15 ಲಕ್ಷ ರೂ.!

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 174.29 ಪಾಯಿಂಟ್ಸ್‌ ಅಥವಾ ಶೇ. 0.33ರಷ್ಟು ಏರಿಕೆಗೊಂಡು 52474.76 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 61.60 ಪಾಯಿಂಟ್ಸ್‌ ಅಥವಾ ಶೇ. 0.39ರಷ್ಟು ಏರಿಕೆಗೊಂಡು 15799.40 ಪಾಯಿಂಟ್ಸ್ ಮುಟ್ಟಿದೆ.

ಸೆನ್ಸೆಕ್ಸ್‌ 174 ಪಾಯಿಂಟ್ಸ್ ಏರಿಕೆ, ನಿಫ್ಟಿ 61 ಪಾಯಿಂಟ್ಸ್‌ ಹೆಚ್ಚಳ

ದಿನದ ವಹಿವಾಟು ಅಂತ್ಯಕ್ಕೆ 1744 ಷೇರುಗಳು ಏರಿಕೆಗೊಂಡರೆ, 1368 ಷೇರುಗಳು ಕುಸಿದವು ಮತ್ತು 138 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಕೋಲ್ ಇಂಡಿಯಾ, ಡಾ. ರೆಡ್ಡಿಸ್ ಲ್ಯಾಬ್ಸ್ ಮತ್ತು ಹಿಂಡಾಲ್ಕೊ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಇಂಡಸ್ಇಂಡ್ ಬ್ಯಾಂಕ್, ಎಲ್ ಆಂಡ್ ಟಿ ಮತ್ತು ಎಚ್‌ಡಿಎಫ್‌ಸಿ ಲೈಫ್ ಷೇರು ಕುಸಿದಿವೆ.

ಐಟಿ, ಮೆಟಲ್ ಮತ್ತು ಫಾರ್ಮಾ ಸೂಚ್ಯಂಕಗಳು ಶೇಕಡಾ 1 ರಿಂದ 2 ರಷ್ಟು ಏರಿಕೆಯಾದರೆ, ಎಫ್‌ಎಂಸಿಜಿ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ಹೆಚ್ಚಿನ ಮಾರಾಟ ಕಂಡುಬಂದಿದೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ, ಭಾರತೀಯ ರೂಪಾಯಿ ಇಂಟ್ರಾಡೇ ಲಾಭವನ್ನು ಅಳಿಸಿಹಾಕಿತು ಮತ್ತು ಡಾಲರ್ ಎದುರು ದಿನದ ಕನಿಷ್ಠ 73.07 ರೂಪಾಯಿಗೆ ಕೊನೆಗೊಂಡಿತು.

English summary

Sensex Up 174 Points: Nifty End At Record High

Sensex was up 174.29 points or 0.33% at 52474.76, and the Nifty was up 61.60 points or 0.39% at 15799.40
Story first published: Friday, June 11, 2021, 16:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X