For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್‌ 221 ಪಾಯಿಂಟ್ಸ್ ಏರಿಕೆ, ನಿಫ್ಟಿ 57 ಪಾಯಿಂಟ್ಸ್ ಹೆಚ್ಚಳ

|

ಭಾರತೀಯ ಷೇರುಪೇಟೆ ಮಂಗಳವಾರ ಸಾಕಷ್ಟು ಏರಿಳಿತಗಳ ನಡುವೆ ಏರುಮುಖದತ್ತ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 221 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 57 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

 

ಅದಾನಿ ಗ್ರೂಪ್ ಷೇರುಗಳಲ್ಲಿ ನಿಲ್ಲದ ಕುಸಿತ: ಹೂಡಿಕೆದಾರರಿಗೆ ಭಾರೀ ನಷ್ಟಅದಾನಿ ಗ್ರೂಪ್ ಷೇರುಗಳಲ್ಲಿ ನಿಲ್ಲದ ಕುಸಿತ: ಹೂಡಿಕೆದಾರರಿಗೆ ಭಾರೀ ನಷ್ಟ

ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.42ರಷ್ಟು ಅಥವಾ 221.52 ಪಾಯಿಂಟ್ಸ್‌ ಏರಿಕೆಗೊಂಡು 52773.05 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 57.40 ಪಾಯಿಂಟ್ಸ್‌ ಅಥವಾ ಶೇ. 0.36ರಷ್ಟು ಹೆಚ್ಚಾಗಿ 15869.30 ಪಾಯಿಂಟ್ಸ್‌ ಮುಟ್ಟಿದೆ.

 
ಸೆನ್ಸೆಕ್ಸ್‌ 221 ಪಾಯಿಂಟ್ಸ್ ಏರಿಕೆ, ನಿಫ್ಟಿ 57 ಪಾಯಿಂಟ್ಸ್ ಹೆಚ್ಚಳ

ದಿನದ ವಹಿವಾಟು ಅಂತ್ಯಕ್ಕೆ 1894 ಷೇರುಗಳು ಏರಿಕೆಗೊಂಡರೆ, 1256 ಷೇರುಗಳು ಕುಸಿದವು ಮತ್ತು 139 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ.

ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಎಚ್‌ಯುಎಲ್ ಹೆಚ್ಚಿನ ಲಾಭ ಗಳಿಸಿದ ಷೇರುಗಳಾಗಿದ್ದು, ಡಿವಿಸ್ ಲ್ಯಾಬ್ಸ್, ಕೋಲ್ ಇಂಡಿಯಾ, ಬಜಾಜ್ ಫಿನ್‌ಸರ್ವ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ನಷ್ಟ ಅನುಭವಿಸಿವೆ.

ಫಾರ್ಮಾ, ಮೆಟಲ್, ಪಿಎಸ್‌ಯು ಬ್ಯಾಂಕ್ ಮತ್ತು ಪವರ್ ಸ್ಟಾಕ್‌ಗಳಲ್ಲಿ ಹೆಚ್ಚಿನ ಮಾರಾಟ ಕಂಡುಬಂದರೆ, ತೈಲ ಮತ್ತು ಅನಿಲ, ಬ್ಯಾಂಕ್, ಐಟಿ ಮತ್ತು ರಿಯಾಲ್ಟಿ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ಲಾಭವನ್ನು ಅಳಿಸಿಹಾಕಿತು ಮತ್ತು ಪ್ರತಿ ಡಾಲರ್‌ಗೆ 73.31 ಕ್ಕೆ ಇಳಿಯಿತು.

English summary

Sensex Up 221 Points: Nifty End At Record Closing High

Sensex was up 221.52 points or 0.42% at 52773.05, and the Nifty was up 57.40 points or 0.36% at 15869.30.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X