For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 238 ಪಾಯಿಂಟ್ಸ್‌ ಏರಿಕೆ, ನಿಫ್ಟಿ 14,700 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆ ಬುಧವಾರವೂ ಸಕಾರಾತ್ಮಕವಾಗಿ ಮುಂದುವರಿದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 238 ಪಾಯಿಂಟ್ಸ್‌ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬೆಳಿಗ್ಗೆ 10.20ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 390.69 ಪಾಯಿಂಟ್ಸ್‌ ಅಥವಾ ಶೇಕಡಾ 0.80ರಷ್ಟು ಹೆಚ್ಚಾಗಿ 49,334.83 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ಶೇಕಡಾ 0.74ರಷ್ಟು ಅಥವಾ 107.85 ಪಾಯಿಂಟ್ಸ್‌ ಏರಿಕೆಗೊಂಡು 14,760.90 ಪಾಯಿಂಟ್ಸ್ ತಲುಪಿದೆ.

ಷೇರುಪೇಟೆ: ಸೆನ್ಸೆಕ್ಸ್ 238 ಪಾಯಿಂಟ್ಸ್‌ ಏರಿಕೆ

ಇಂದು ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇನಲ್ಲಿ ಸುಮಾರು 1,142 ಷೇರುಗಳು ಏರಿಕೆಗೊಂಡರೆ, 242 ಷೇರುಗಳು ಕುಸಿದವು ಮತ್ತು 55 ಕಂಪನಿಗಳ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬಜಾಜ್ ಆಟೋ ಷೇರು ಸುಮಾರು 65 ರೂ ಗಳಿಸಿ 3,850.30 ರೂ., ಬಜಾಜ್ ಫೈನಾನ್ಸ್ ಷೇರುಗಳು 83 ರೂ.ಗಳಿಂದ 4,948.00 ರೂ., ದೇವಿ ಲ್ಯಾಬ್ ಷೇರುಗಳು ಸುಮಾರು 47 ರೂ.ಗಳಿಂದ 3,955.60 ರೂ., ಈಚರ್ ಮೋಟಾರ್ಸ್ ಷೇರುಗಳು 28 ರೂ ಗಳಿಸಿ 2,428.20 ರೂಗಳಿಗೆ ತಲುಪಿದೆ. ಎಸ್‌ಬಿಐ ಷೇರು ಸುಮಾರು 4 ರೂ.ಗಳ ಏರಿಕೆ ಕಂಡು 357.05 ರೂ. ತಲುಪಿದೆ.

ಏಪ್ರಿಲ್ 28 ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಏರಿಕೆ ದಾಖಲಿಸಿತು. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಹಿಂದಿನ 74.66 ಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 15 ಪೈಸೆ ಹೆಚ್ಚಳಗೊಂಡು 74.51 ಕ್ಕೆ ತೆರೆಯಿತು.

English summary

Sensex Up 238 Points: Nifty Above 14,700

Sensex was up 238.60 points or 0.49% at 49182.74, and the Nifty was up 70.30 points or 0.48% at 14723.30.
Story first published: Wednesday, April 28, 2021, 10:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X