For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 256 ಪಾಯಿಂಟ್ಸ್‌ ಹೆಚ್ಚಳ: ನಿಫ್ಟಿ ಕೂಡ ಏರಿಕೆ

|

ಭಾರತೀಯ ಷೇರುಪೇಟೆ ಸತತ ಮೂರನೇ ದಿನ ಹಸಿರು ಬಣ್ಣದಲ್ಲಿ ವಹಿವಾಟು ಕೊನೆಗೊಳಿಸಿದೆ. ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 256 ಪಾಯಿಟ್ಸ್‌ ಹೆಚ್ಚಳಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,800 ಪಾಯಿಂಟ್ಸ್‌ ಗಡಿ ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.52ರಷ್ಟು ಅಥವಾ 56 ಪಾಯಿಂಟ್ಸ್‌ ಹೆಚ್ಚಳಗೊಂಡು 49206.47 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.67ರಷ್ಟು ಅಥವಾ 98.35 ಪಾಯಿಂಟ್ಸ್‌ ಏರಿಕೆಗೊಂಡು 14823.15 ಪಾಯಿಂಟ್ಸ್‌ ಮುಟ್ಟಿದೆ.

Closing Bell: ಸೆನ್ಸೆಕ್ಸ್ 256 ಪಾಯಿಂಟ್ಸ್‌ ಹೆಚ್ಚಳ

ಎಚ್‌ಡಿಎಫ್‌ಸಿ, ಬಜಾಜ್ ಫಿನ್‌ಸರ್ವ್, ಎಂ ಅಂಡ್ ಎಂ, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸೆನ್ಸೆಕ್ಸ್‌ನಲ್ಲಿ ಹೆಚ್ಚು ಲಾಭ ಗಳಿಸಿದರೆ, ಬಜಾಜ್ ಆಟೋ, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿವೆ.

ನಿಫ್ಟಿ ಮೆಟಲ್ ಸೂಚ್ಯಂಕವು ಶೇಕಡಾ 4.7 ರಷ್ಟು ಏರಿಕೆ ಕಂಡರೆ, ಪಿಎಸ್‌ಯು ಬ್ಯಾಂಕ್ ಸೂಚ್ಯಂಕ ಇಳಿಕೆಗೊಂಡಿದೆ. ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.4 ರಷ್ಟು ಕುಸಿದಿದ್ದರೆ, ನಿಫ್ಟಿ ಸ್ಮಾಲ್‌ಕ್ಯಾಪ್‌ ಸೂಚ್ಯಂಕವು ಶೇಕಡಾ 0.7 ರಷ್ಟು ಕುಸಿದಿದೆ.

English summary

Sensex Up 256 Points: Nifty Ends Above 14800

Nifty50 rising 98.40 points to 14,823.20 and the BSE Sensex up 256.71 points at 49,206.47, led by rally in metals stocks.
Story first published: Friday, May 7, 2021, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X