ಭಾರತೀಯ ಷೇರುಪೇಟೆಯು ಗುರುವಾರ ಸಾಕಷ್ಟು ಏರಿಳಿತಗೊಂಡ ಬಳಿಕ ಹಸಿರು ಬಣ್ಣದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 259 ಪಾಯಿಂಟ್ಸ್ ಏರಿಕೆಯಾಗಿದ್ದು, ನಿಫ್ಟಿ 76 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.53ರಷ್ಟು ಅಥವಾ 259.62 ಪಾಯಿಂಟ್ಸ್ ಹೆಚ್ಚಳಗೊಂಡು 48,803.68 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 76.70 ಪಾಯಿಂಟ್ಸ್ ಅಥವಾ ಶೇಕಡಾ 0.53ರಷ್ಟು ಏರಿಕೆಗೊಂಡು 14,581.50 ಪಾಯಿಂಟ್ಸ್ ತಲುಪಿದೆ.

ಇಂದು 1226 ಷೇರುಗಳು ಏರಿಕೆಗೊಂಡರೆ, 1611 ಷೇರುಗಳು ಕುಸಿದಿವೆ ಮತ್ತು 162 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎನ್‌ಎಸ್‌ಇನಲ್ಲಿ ಟಿಸಿಎಸ್, ಸಿಪ್ಲಾ, ಒಎನ್‌ಜಿಸಿ, ವಿಪ್ರೋ ಮತ್ತು ಅದಾನಿ ಪೋರ್ಟ್ಸ್ ಪ್ರಮುಖ ಲಾಭಗಳಿಸಿದ ಷೇರುಗಳಾಗಿದ್ದು, ಈಚರ್ ಮೋಟಾರ್ಸ್, ಗ್ರಾಸಿಮ್ ಇಂಡಸ್ಟ್ರೀಸ್, ಇನ್ಫೋಸಿಸ್, ಮಾರುತಿ ಸುಜುಕಿ ಮತ್ತು ಇಂಡಸ್‌ಇಂಡ್ ಬ್ಯಾಂಕ್ ನಷ್ಟಗೊಂಡ ಷೇರುಗಳಾಗಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಆರಂಭಿಕ ನಷ್ಟವನ್ನು ಅಳಿಸಿಹಾಕಿದೆ ಮತ್ತು ದಿನದ ಗರಿಷ್ಠ 74.92 ರೂಪಾಯಿಗೆ ಕೊನೆಗೊಂಡಿದೆ.


Click it and Unblock the Notifications