For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 264 ಪಾಯಿಂಟ್ಸ್‌ ಏರಿಕೆ: ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆಯು ಮಂಗಳವಾರ ಬೌನ್ಸ್‌ಬ್ಯಾಕ್ ಆಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 264 ಪಾಯಿಂಟ್ಸ್‌ ಏರಿಕೆ ದಾಖಲಿಸಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

 

ಇಂದಿನಿಂದ ಚಿನ್ನದ ಹಾಲ್‌ಮಾರ್ಕ್ ಕಡ್ಡಾಯ: ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿಇಂದಿನಿಂದ ಚಿನ್ನದ ಹಾಲ್‌ಮಾರ್ಕ್ ಕಡ್ಡಾಯ: ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 264 ಪಾಯಿಂಟ್ಸ್ ಅಥವಾ ಶೇಕಡಾ 0.50ರಷ್ಟು ಏರಿಕೆಗೊಂಡು 52815.79 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 70.90 ಪಾಯಿಂಟ್ಸ್‌ ಅಥವಾ ಶೇ. 0.45ರಷ್ಟು ಏರಿಕೆಗೊಂಡು 15882.80 ಪಾಯಿಂಟ್ಸ್‌ ಮುಟ್ಟಿದೆ.

 

ದಿನದ ವಹಿವಾಟು ಆರಂಭದಲ್ಲಿ 1947 ಷೇರುಗಳು ಏರಿಕೆಗೊಂಡರೆ, 716 ಷೇರುಗಳು ಕುಸಿದಿವೆ ಮತ್ತು 87 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 264 ಪಾಯಿಂಟ್ಸ್‌ ಏರಿಕೆ: ನಿಫ್ಟಿ 70 ಪಾಯಿಂಟ್ಸ್‌ ಹೆಚ್ಚಳ

ಏರಿಕೆಗೊಂಡ ಷೇರುಗಳು:
ಅದಾನಿ ಪೋರ್ಟ್ಸ್ ಷೇರುಗಳು 15 ರೂ.ಗಳ ಲಾಭದೊಂದಿಗೆ 783.15 ರೂ., ಕೋಲ್ ಇಂಡಿಯಾದ ಷೇರುಗಳು ಸುಮಾರು 1 ರೂ.ಗಳ ಲಾಭದೊಂದಿಗೆ 160.75 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 2 ರೂ.ಗಳ ಏರಿಕೆ ಕಂಡು 250.75 ರೂ., ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 125.90 ರೂ., ಎಚ್‌ಡಿಎಫ್‌ಸಿ ಷೇರುಗಳು 18 ರೂ.ಗಳ ಏರಿಕೆ ಕಂಡು 2,557.50 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 920 ರೂ.ಗಳಷ್ಟು ಇಳಿಕೆಯಾಗಿ 720.50 ರೂ., ಹಿಂಡಾಲ್ಕೊ ಷೇರು ಸುಮಾರು 3 ರೂ.ಗಳ ಕುಸಿತದೊಂದಿಗೆ 392.00 ರೂ.ಗೆ ಪ್ರಾರಂಭವಾಯಿತು. ಯುಪಿಎಲ್ ಷೇರು ಸುಮಾರು 3 ರೂ. ಇಳಿಕೆಗೊಂಡು 831.15 ರೂ.ಗೆ ಪ್ರಾರಂಭವಾಯಿತು, ಟಾಟಾ ಸ್ಟೀಲ್ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 1,162.35 ರೂ., ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 984.20 ರೂ. ತಲುಪಿದೆ.

English summary

Sensex Up 264 Points: Nifty Up 70 Points

Sensex was up 264.26 points or 0.50% at 52815.79, and the Nifty was up 70.90 points or 0.45% at 15882.80.
Story first published: Tuesday, June 15, 2021, 10:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X