For Quick Alerts
ALLOW NOTIFICATIONS  
For Daily Alerts

ಷೇರುಪೇಟೆ :ಸೆನ್ಸೆಕ್ಸ್‌ ಭರ್ಜರಿ ಓಟ, 280 ಪಾಯಿಂಟ್ಸ್ ಏರಿಕೆ

|

ಭಾರತೀಯ ಷೇರುಪೇಟೆಯಲ್ಲಿ ಗೂಳಿ ಓಟವು ಮುಂದುವರಿದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೋಮವಾರ (ಮೇ 31) 280 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15500ರ ಗಡಿದಾಟಿದೆ.

ಸ್ಥಳೀಯ ಲಾಕ್‌ಡೌನ್ ವಿಸ್ತರಣೆ : ಬೇಡಿಕೆ ಮತ್ತು ಖರ್ಚಿನ ಮೇಲೆ ಆಳವಾದ ಪರಿಣಾಮಸ್ಥಳೀಯ ಲಾಕ್‌ಡೌನ್ ವಿಸ್ತರಣೆ : ಬೇಡಿಕೆ ಮತ್ತು ಖರ್ಚಿನ ಮೇಲೆ ಆಳವಾದ ಪರಿಣಾಮ

ಬೆಳಿಗ್ಗೆ 10.40ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.56ರಷ್ಟು ಅಥವಾ 286.68 ಪಾಯಿಂಟ್ಸ್‌ನಷ್ಟು ಏರಿಕೆಗೊಂಡು 51709.56 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.45ರಷ್ಟು ಅಥವಾ 69.4ರಷ್ಟು ಏರಿಕೆಗೊಂಡು 15505.05 ಪಾಯಿಂಟ್ಸ್‌ ಮುಟ್ಟಿದೆ.

ಷೇರುಪೇಟೆ :ಸೆನ್ಸೆಕ್ಸ್‌ ಭರ್ಜರಿ ಓಟ, 280 ಪಾಯಿಂಟ್ಸ್ ಏರಿಕೆ

ಆರಂಭಿಕ ವಹಿವಾಟಿನಲ್ಲಿ 1492 ಷೇರುಗಳು ಏರಿಕೆಗೊಡಿವೆ, 1118 ಷೇರುಗಳು ಕುಸಿದಿವೆ ಮತ್ತು 118 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಡಿವಿಸ್ ಲ್ಯಾಬ್ಸ್, ಐಟಿಸಿ, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್‌ಟೆಲ್‌ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಎಂ & ಎಂ, ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಎಚ್‌ಡಿಎಫ್‌ಸಿ ಮತ್ತು ಇನ್ಫೋಸಿಸ್ ಇಳಿಕೆಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ಪ್ರತಿ ಡಾಲರ್‌ಗೆ 72.39 ಕ್ಕೆ ತಲುಪಿದೆ.

English summary

Sensex Up 280 Points: Nifty Above 15500

Sensex was up 286.68 points or 0.56% at 51709.56, and the Nifty was up 69.4 points or 0.45% at 15505.05
Story first published: Monday, May 31, 2021, 10:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X