ಭಾರತೀಯ ಷೇರುಪೇಟೆ ಸತತವಾಗಿ ಏರಿಕೆಯ ಹಾದಿ ಹಿಡಿದಿದ್ದು ಶುಕ್ರವಾರ (ಮೇ 28) ಮತ್ತಷ್ಟು ಎತ್ತರಕ್ಕೆ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 291 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 99.10 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.57ರಷ್ಟು ಅಥವಾ 291.44 ಪಾಯಿಂಟ್ಸ್ ಏರಿಕೆಗೊಂಡು 51406.66 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.65ರಷ್ಟು ಅಥವಾ 99.10 ಪಾಯಿಂಟ್ಸ್ ಹೆಚ್ಚಾಗಿ 15437 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಆರಂಭಗೊಂಡಾಗ 1363 ಷೇರುಗಳು ಏರಿಕೆಗೊಂಡರೆ, 419 ಷೇರುಗಳು ಕುಸಿದವು ಮತ್ತು 60 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು:
ಟಾಟಾ ಸ್ಟೀಲ್ ಷೇರುಗಳು ಸುಮಾರು 42 ರೂ.ಗಳ ಏರಿಕೆ ಕಂಡು 1,138.30 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 21 ರೂ.ಗಳ ಏರಿಕೆ ಕಂಡು 702.55 ರೂ., ಈಚರ್ ಮೋಟಾರ್ಸ್ ಷೇರುಗಳು 77 ರೂ ಗಳಿಸಿ 2,680.55 ರೂಗಳಿಗೆ ತಲುಪಿದೆ. ಹಿಂಡಾಲ್ಕೊ ಷೇರು ಸುಮಾರು 10 ರೂ.ಗಳ ಏರಿಕೆ ಕಂಡು 395.55 ರೂ., ಗ್ರೇಸಿಮ್‌ನ ಷೇರು ಸುಮಾರು 20 ರೂ.ಗಳಿಂದ 1,437.35 ರೂ. ತಲುಪಿದೆ.
ಇಳಿಕೆಗೊಂಡು ಪ್ರಮುಖ ಷೇರುಗಳು:
ಸನ್ ಫಾರ್ಮಾ ಷೇರುಗಳು 17 ರೂ.ಗಳ ಇಳಿಕೆ 682.60 ರೂ., ವಿಪ್ರೋ ಷೇರುಗಳು ಸುಮಾರು 5 ರೂ.ಗಳ ಕುಸಿತ ಕಂಡು 536.35 ರೂ., ಡಾ. ರೆಡ್ಡಿ ಲ್ಯಾಬ್ಸ್ ಷೇರು ಸುಮಾರು 44 ರೂ.ಗಳನ್ನು ಕಳೆದುಕೊಂಡು 5,225.05 ರೂ., ಸಿಪ್ಲಾ ಷೇರು 7 ರೂ. ಕುಸಿದು 934.95 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 6 ರೂ.ಗಳ ಕುಸಿತ ಕಂಡು 823.05 ರೂ. ತಲುಪಿದೆ.


Click it and Unblock the Notifications