ಭಾರತೀಯ ಷೇರುಪೇಟೆಯು ವೇಗವಾದ ಏರುಮುಖ ಸಾಧಿಸಿದ್ದು, ಶುಕ್ರವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 307 ಪಾಯಿಂಟ್ಸ್ ಹೆಚ್ಚಾಗಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಹೊಸ ದಾಖಲೆಯ ಮಟ್ಟವನ್ನೇ ತಲುಪಿ ಬಿಟ್ಟಿದೆ.
ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 307.66 ಪಾಯಿಂಟ್ಸ್ ಅಥವಾ ಶೇಕಡಾ 0.60ರಷ್ಟು ಏರಿಕೆಗೊಂಡು 51422.88 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 97.80 ಪಾಯಿಂಟ್ಸ್ ಅಥವಾ ಶೇಕಡಾ 0.64ರಷ್ಟು ಹೆಚ್ಚಾಗಿ 15435.70 ಪಾಯಿಂಟ್ಸ್ ಮುಟ್ಟಿದೆ.

ಇಂದು ಸುಮಾರು 1394 ಷೇರುಗಳು ಏರಿಕೆಗೊಂಡರೆ, 1674 ಷೇರುಗಳು ಕುಸಿತಗೊಂಡಿವೆ ಮತ್ತು 138 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ರಿಲಯನ್ಸ್ ಇಂಡಸ್ಟ್ರೀಸ್, ಗ್ರೇಸಿಮ್ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್, ಎಂ ಅಂಡ್ ಎಂ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಸನ್ ಫಾರ್ಮಾ, ಶ್ರೀ ಸಿಮೆಂಟ್ಸ್, ಬಜಾಜ್ ಫಿನ್‌ಸರ್ವ್, ಡಾ. ರೆಡ್ಡಿಸ್ ಲ್ಯಾಬ್ಸ್ ಮತ್ತು ಐಸಿಐಸಿಐ ಬ್ಯಾಂಕ್ ನಷ್ಟ ಅನುಭವಿಸಿವೆ.
ಫಾರ್ಮಾ ಮತ್ತು ಐಟಿ ಹೊರತುಪಡಿಸಿ, ಇತರ ಎಲ್ಲ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 15 ಪೈಸೆ ಏರಿಕೆಯಾಗಿ ಪ್ರತಿ ಡಾಲರ್‌ಗೆ 72.43 ರೂಪಾಯಿಗೆ ತಲುಪಿದೆ.


Click it and Unblock the Notifications