ಭಾರತೀಯ ಷೇರುಪೇಟೆ ಬುಧವಾರ ಸಕಾರಾತ್ಮಕ ವಹಿವಾಟಿನ ಜೊತೆಗೆ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 379 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15300 ಮಟ್ಟಕ್ಕಿಂತ ಎತ್ತರವಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.75ರಷ್ಟು ಅಥವಾ 379.99 ಪಾಯಿಂಟ್ಸ್ ಏರಿಕೆಗೊಂಡು 51,017.52 ಪಾಯಿಂಟ್ಸ್ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 93 ಪಾಯಿಂಟ್ಸ್ ಅಥವಾ ಶೇಕಡಾ 0.61ರಷ್ಟು ಹೆಚ್ಚಾಗಿ 15,301.50 ಪಾಯಿಂಟ್ಸ್‌ಗೆ ತಲುಪಿದೆ.

ದಿನದ ವಹಿವಾಟು ಅಂತ್ಯಕ್ಕೆ 1913 ಷೇರುಗಳು ಏರಿಕೆಗೊಂಡರೆ, 1146 ಷೇರುಗಳು ಕುಸಿದಿವೆ ಮತ್ತು 140 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಯುಪಿಎಲ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಪವರ್ ಗ್ರಿಡ್ ಕಾರ್ಪ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮತ್ತು ಎನ್‌ಟಿಪಿಸಿ ನಷ್ಟಗೊಂಡಿವೆ.
ಶಕ್ತಿ ಮತ್ತು ಲೋಹದ ಸೂಚ್ಯಂಕಗಳು ಶೇಕಡಾ 1 ರಿಂದ 2 ರಷ್ಟು ಕುಸಿದರೆ, ಐಟಿ, ರಿಯಾಲ್ಟಿ ಸೂಚ್ಯಂಕಗಳು ತಲಾ 2 ಪ್ರತಿಶತದಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಸಮತಟ್ಟಾಗಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 0.7 ರಷ್ಟು ಏರಿಕೆಯಾಗಿದೆ.


Click it and Unblock the Notifications