ಭಾರತೀಯ ಷೇರುಪೇಟೆಯು ಸೋಮವಾರ ಸಕಾರಾತ್ಮಕ ವಹಿವಾಟು ಮೂಲಕ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 395 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 112 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.75ರಷ್ಟು ಅಥವಾ 395 ಪಾಯಿಂಟ್ಸ್ ಏರಿಕೆಗೊಂಡು 52,880 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.71ರಷ್ಟು ಅಥವಾ 112.20 ಪಾಯಿಂಟ್ಸ್ ಹೆಚ್ಚಾಗಿ 15,834.40 ಪಾಯಿಂಟ್ಸ್ ಮುಟ್ಟಿದೆ.

ಹಿಂಡಾಲ್ಕೊ ಇಂಡಸ್ಟ್ರೀಸ್, ಒಎನ್‌ಜಿಸಿ, ಎಸ್‌ಬಿಐ, ಟಾಟಾ ಸ್ಟೀಲ್ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಡಿಎಫ್‌ಸಿ ಲೈಫ್, ಟೆಕ್ ಮಹೀಂದ್ರಾ, ಡಾ. ರೆಡ್ಡಿ ಲ್ಯಾಬ್ಸ್, ಬಿಪಿಸಿಎಲ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಹೆಚ್ಚಿನ ನಷ್ಟ ಅನುಭವಿಸಿದ ಷೇರುಗಳಾಗಿವೆ.
ನಿಫ್ಟಿ ಬ್ಯಾಂಕ್, ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಏರಿಕೆಯಾದರೆ, ಐಟಿ ಷೇರುಗಳಲ್ಲಿ ಮಾರಾಟ ಕಂಡುಬಂದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.3 ರಿಂದ 0.8ರಷ್ಟು ಏರಿಕೆಯಾಗಿದೆ.


Click it and Unblock the Notifications