For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್ ಏರಿಕೆಯೊಂದಿಗೆ ಆರಂಭ

|

ಭಾರತೀಯ ಷೇರುಪೇಟೆ ಶುಕ್ರವಾರ ಏರಿಕೆಯ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 400 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,800 ಪಾಯಿಂಟ್ಸ್‌ ಗಡಿ ದಾಟಿದೆ.

ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 338.19 ಪಾಯಿಂಟ್ಸ್‌ ಅಥವಾ ಶೇಕಡಾ 0.69ರಷ್ಟು ಹೆಚ್ಚಾಗಿ 49,287.90 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 106.60 ಪಾಯಿಂಟ್ಸ್‌ ಅಥವಾ ಶೇಕಡಾ 0.72ರಷ್ಟು ಏರಿಕೆಗೊಂಡು 14,831.40 ಪಾಯಿಂಟ್ಸ್‌ ಮುಟ್ಟಿದೆ.

ಷೇರುಪೇಟೆ: ಸೆನ್ಸೆಕ್ಸ್ 400 ಪಾಯಿಂಟ್ಸ್ ಏರಿಕೆ

ಆರಂಭಿಕ ವಹಿವಾಟಿನಲ್ಲಿ 1,155 ಷೇರುಗಳು ಏರಿಕೆಗೊಂಡರೆ, 272 ಷೇರುಗಳು ಕುಸಿದವು ಮತ್ತು 63 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:

ಎಸ್‌ಬಿಐ ಲೈಫ್ ಷೇರುಗಳು ಸುಮಾರು 36 ರೂ. ಏರಿಕೆಗೊಂಡು 1,005.10 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 38 ರೂ.ಗಳಿಂದ 1,139.25 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 15 ರೂ. 745.25 ರೂ., ಹಿಂಡಾಲ್ಕೊ ಷೇರು ಸುಮಾರು 8 ರೂ.ಗಳಿಂದ 393.75 ರೂ., ಬಾಜಾ ಫೈನಾನ್ಸ್‌ನ ಷೇರುಗಳು ಸುಮಾರು 81 ರೂ.ಗಳ ಲಾಭದೊಂದಿಗೆ ಪ್ರಾರಂಭವಾಗಿ 5,609.60 ರೂ. ತಲುಪಿದೆ.

English summary

Sensex Up 400 Points: Nifty Above 14800

Sensex was up 338.14 points or 0.69% at 49287.90, and the Nifty was up 106.60 points or 0.72% at 14831.40.
Story first published: Friday, May 7, 2021, 9:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X