For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 424 ಪಾಯಿಂಟ್ಸ್‌ ಏರಿಕೆ, ನಿಫ್ಟಿ 121 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆ ಬುಧವಾರ ಚೇತರಿಕೆ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 424 ಪಾಯಿಂಟ್ಸ್‌ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 121 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.88ರಷ್ಟು ಅಥವಾ 424 ಪಾಯಿಂಟ್ಸ್ ಏರಿಕೆಗೊಂಡು 48,677.04 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 121.35 ಪಾಯಿಂಟ್ಸ್‌ ಅಥವಾ ಶೇಕಡಾ 0.84ರಷ್ಟು ಏರಿಕೆಗೊಂಡು 14617.85 ಪಾಯಿಂಟ್ಸ್ ಮುಟ್ಟಿದೆ.

ಸೆನ್ಸೆಕ್ಸ್ 424 ಪಾಯಿಂಟ್ಸ್‌ ಏರಿಕೆ,ನಿಫ್ಟಿ 121 ಪಾಯಿಂಟ್ಸ್‌ ಹೆಚ್ಚಳ

ದಿನದ ವಹಿವಾಟು ಅಂತ್ಯಕ್ಕೆ ಇಂದು ಸುಮಾರು 1,794 ಷೇರುಗಳು ಏರಿಕೆಗೊಂಡರೆ, 1,084 ಷೇರುಗಳು ಕುಸಿತಗೊಂಡಿವೆ ಮತ್ತು 116 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸನ್ ಫಾರ್ಮಾ, ಯುಪಿಎಲ್, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಏಷ್ಯನ್ ಪೇಂಟ್ಸ್ ಮತ್ತು ಎಚ್‌ಯುಎಲ್ ನಷ್ಟ ಅನುಭವಿಸಿವೆ.

ಬಹುತೇಕ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿದ್ದು ನಿಫ್ಟಿ ಬ್ಯಾಂಕ್, ಐಟಿ, ಫಾರ್ಮಾ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇಕಡಾ 1ರಿಂದ 4 ರಷ್ಟು ಏರಿಕೆಯಾಗಿದೆ.

English summary

Sensex Up 424 Points: Nifty Ends Above 14600

Sensex was up 424.04 points or 0.88% at 48,677.55, and the Nifty was up 121.40 points or 0.84% at 14,617.90.
Story first published: Wednesday, May 5, 2021, 15:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X