ಭಾರತೀಯ ಷೇರುಪೇಟೆಯ ನಾಗಾಲೋಟವು ಮಂಗಳವಾರವು ಮುಂದುವರಿದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 447 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 157 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.90ರಷ್ಟು ಅಥವಾ 447.05 ಪಾಯಿಂಟ್ಸ್ ಹೆಚ್ಚಳಗೊಂಡು 50,296.89 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 157.60 ಪಾಯಿಂಟ್ಸ್ ಅಥವಾ ಶೇಕಡಾ 1.07ರಷ್ಟು ಹೆಚ್ಚಾಗಿ 14,919.10 ಸೂಚ್ಯಂಕಗಳನ್ನು ತಲುಪಿದೆ. ಇಂದು 1813 ಷೇರುಗಳು ಏರಿಕೆಗೊಂಡರೆ, 1138 ಷೇರುಗಳು ಕುಸಿದಿವೆ ಮತ್ತು 166 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಮೋಟಾರ್ಸ್, ಎಂ ಅಂಡ್ ಎಂ, ವಿಪ್ರೊ, ಅದಾನಿ ಪೋರ್ಟ್ಸ್ ಮತ್ತು ಎನ್‌ಟಿಪಿಸಿ ನಿಫ್ಟಿ ಗಳಿಸಿದ ಪ್ರಮುಖ ಷೇರುಗಳಾಗಿದ್ದು, ಒಎನ್‌ಜಿಸಿ, ಎಚ್‌ಡಿಎಫ್‌ಸಿ, ಡಾ. ರೆಡ್ಡಿ ಲ್ಯಾಬ್ಸ್, ಕೋಲ್ ಇಂಡಿಯಾ ಮತ್ತು ಪವರ್ ಗ್ರಿಡ್ ಕಾರ್ಪ್ ನಷ್ಟ ಅನುಭವಿಸಿದೆ.
ನಿಫ್ಟಿ ಐಟಿ ಮತ್ತು ಆಟೊಮೊಬೈಲ್ ಸೂಚ್ಯಂಕಗಳು ತಲಾ ಶೇಕಡಾ 3 ರಷ್ಟು ಏರಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಯಾಮ್‌ಕ್ಯಾಪ್ ಸೂಚ್ಯಂಕಗಳು ತಲಾ 1.5 ಪ್ರತಿಶತದಷ್ಟು ಹೆಚ್ಚಾಗಿವೆ.
ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಖರೀದಿಯ ಮಧ್ಯೆ ಭಾರತೀಯ ರೂಪಾಯಿ 19 ಪೈಸೆ ಏರಿಕೆ ಕಂಡು ಪ್ರತಿ ಡಾಲರ್‌ಗೆ 73.36 ಕ್ಕೆ ತಲುಪಿದೆ.


Click it and Unblock the Notifications