ಸೆನ್ಸೆಕ್ಸ್ 460 ಪಾಯಿಂಟ್ಸ್ ಜಿಗಿತ: ನಿಫ್ಟಿ 15,300 ಮಟ್ಟಕ್ಕಿಂತ ಹೆಚ್ಚಳ
ಜಾಗತಿಕವಾಗಿ ಧನಾತ್ಮಕ ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಶುಕ್ರವಾರ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 460 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 15,300 ಮಟ್ಟಕ್ಕಿಂತ ಹೆಚ್ಚಾಗಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಭಾರತೀಯಕಾಲಮಾನ ಬೆಳಿಗ್ಗೆ 9.16ರ ಸುಮಾರಿಗೆ 507.73 ಪಾಯಿಂಟ್ ಅಥವಾ ಶೇಕಡಾ 0.99ರಷ್ಟು ಏರಿಕೆಗೊಂಡು 51,787.24 ಕ್ಕೆ ತಲುಪಿದೆ, ಮತ್ತು ನಿಫ್ಟಿ 136.10 ಪಾಯಿಂಟ್ ಅಥವಾ ಶೇಕಡಾ 0.90ರಷ್ಟು ಹೆಚ್ಚಾಗಿ 15,310.90 ಕ್ಕೆ ತಲುಪಿದೆ. ಸುಮಾರು 1214 ಷೇರುಗಳು ಏರಿಕೆಗೊಂಡರೆ, 297 ಷೇರುಗಳು ಕುಸಿದವು, ಮತ್ತು 97 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಬಿಎಸ್‌ಇನಲ್ಲಿ ಟಾಟಾ ಪವರ್, ಪವರ್ ಫೈನಾನ್ಸ್, ಬಿಪಿಸಿಎಲ್, ಜಿಂದಾಲ್ ಸ್ಟೀಲ್, ಟಾಟಾ ಕೆಮಿಕಲ್ಸ್, ಅಪೊಲೊ ಟೈಯರ್ಸ್, ಜಿಎಸ್‌ಡಬ್ಲ್ಯೂ ಸ್ಟೀಲ್ ಏರಿಕೆ ಸಾಧಿಸಿದ್ದು, ಬಜಾಜ್ ಆಟೋ, ಹೆಚ್‌ಯುಎಲ್, ಡಾ. ರೆಡ್ಡಿ ಲ್ಯಾಬ್ಸ್ ಮಾರುತಿ ಸುಜುಕಿ, ಸನ್‌ಫಾರ್ಮಾ, ನೆಸ್ಲೆ, ಕೋಟಕ್ ಮಹೀಂದ್ರಾ ಷೇರುಗಳು ಇಳಿಕೆಗೊಂಡಿವೆ.


Click it and Unblock the Notifications