Closing Bell: ಸೆನ್ಸೆಕ್ಸ್ 460 ಪಾಯಿಂಟ್ಸ್ ಏರಿಕೆ, ನಿಫ್ಟಿ 135 ಪಾಯಿಂಟ್ಸ್ ಹೆಚ್ಚಳ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಪರಿಶೀಲನೆ ಬಳಿಕ ಬುಧವಾರ ಭಾರತೀಯ ಷೇರುಪೇಟೆ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 460 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 135 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.94ರಷ್ಟು ಅಥವಾ 460.37 ಪಾಯಿಂಟ್ಸ್ ಹೆಚ್ಚಳಗೊಂಡು 49,661.76 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.92ರಷ್ಟು ಅಥವಾ 135.50 ಪಾಯಿಂಟ್ಸ್ ಏರಿಕೆಗೊಂಡು 14,819 ಪಾಯಿಂಟ್ಸ್‌ಗೆ ತಲುಪಿದೆ. ಇಂದು 1,824 ಷೇರುಗಳು ಏರಿಕೆಗೊಂಡಿದ್ದು, 1,072 ಷೇರುಗಳು ಕುಸಿತಗೊಂಡಿವೆ ಮತ್ತು 179 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಎನ್‌ಎಸ್‌ಇನಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್, ವಿಪ್ರೊ, ಬ್ರಿಟಾನಿಯಾ ಇಂಡಸ್ಟ್ರೀಸ್, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಮತ್ತು ಎಸ್‌ಬಿಐ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಯುಪಿಎಲ್, ಎನ್‌ಟಿಪಿಸಿ ಮತ್ತು ಟೈಟಾನ್ ಕಂಪನಿ ಷೇರುಗಳು ಕುಸಿದಿವೆ.
ಪಿಎಸ್‌ಯು ಬ್ಯಾಂಕ್, ಐಟಿ, ಮೆಟಲ್, ಆಟೊಮೊಬೈಲ್ ಶೇಕಡಾ 1 ರಿಂದ 2 ರಷ್ಟು ಏರಿಕೆಯೊಂದಿಗೆ ಎಲ್ಲಾ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ 0.8 ರಿಂದ 1.3 ರಷ್ಟು ಏರಿಕೆಯಾಗಿದೆ.