For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 500 ಪಾಯಿಂಟ್ಸ್‌ ಜಿಗಿತ: 15 ಸಾವಿರ ಗಡಿದಾಟಿದ ನಿಫ್ಟಿ

|

ಭಾರತೀಯ ಷೇರುಪೇಟೆಯು ಗುರುವಾರ ಭರ್ಜರಿ ಆರಂಭ ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಪಾಯಿಂಟ್ಸ್‌ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿದಾಟಿದೆ.

ಬೆಳಿಗ್ಗೆ 9.16 ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 510.62 ಪಾಯಿಂಟ್ ಅಥವಾ 1.03% ರಷ್ಟು ಏರಿಕೆಗೊಂಡು 50244.46 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 145.40 ಪಾಯಿಂಟ್ ಅಥವಾ 0.98% ರಷ್ಟು ಏರಿಕೆಗೊಂಡು 15009.90 ಕ್ಕೆ ಏರಿದೆ.

ಆರಂಭಿಕ ವಹಿವಾಟಿನಲ್ಲಿ ಸುಮಾರು 1,151 ಷೇರುಗಳು ಏರಿಕೆಗೊಂಡರೆ, 201 ಷೇರುಗಳು ಕುಸಿದವು, ಮತ್ತು 43 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಸೆನ್ಸೆಕ್ಸ್ 500 ಪಾಯಿಂಟ್ಸ್‌ ಜಿಗಿತ: 15 ಸಾವಿರ ಗಡಿದಾಟಿದ ನಿಫ್ಟಿ

ಏರಿಕೆಗೊಂಡ ಪ್ರಮುಖ ಷೇರುಗಳು:
ಹಿಂಡಾಲ್ಕೊ ಷೇರು ಸುಮಾರು 7 ರೂ.ಗಳ ಏರಿಕೆ ಕಂಡು 369.85 ರೂ., ಆರ್‌ಐಎಲ್‌ 38 ರೂ. ಏರಿಕೆಗೊಂಡು 2,035.10 ರೂ, ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 106 ರೂ.ಗಳ ಏರಿಕೆ ಕಂಡು 5,386.70 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 17 ರೂ.ಗಳ ಏರಿಕೆ ಕಂಡು 988.00 ರೂ., ಎಚ್‌ಡಿಎಫ್‌ಸಿ ಷೇರುಗಳು ಸುಮಾರು 41 ರೂ.ಗಳಿಂದ 2,618.40 ರೂ. ತಲುಪಿದೆ.

ಇಳಿಕೆಗೊಂಡ ಪ್ರಮುಖ ಷೇರುಗಳು:
ಎಚ್‌ಸಿಎಲ್ ಟೆಕ್ , ಎಸ್‌ಬಿಐ ಲೈಫ್ ಇನ್ಸುರೆನ್ಸ್ , ಸಿಪ್ಲಾ , ನೆಸ್ಲೆ ಷೇರುಗಳು ಇಳಿಕೆಗೊಂಡಿವೆ

English summary

Sensex Up 500 Points, Nifty Crossed 15K

Sensex was up 510.62 points or 1.03% at 50244.46, and the Nifty was up 145.40 points or 0.98% at 15009.90
Story first published: Thursday, April 29, 2021, 10:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X